ಗುರುಗಳನ್ನು ನೆನೆದು ಅವರಿಗೆ ವಂದನೆ ಅರ್ಪಿಸುವದು ಮಹಾ ಕಾರ್ಯ:ಚಿದಾನಂದ ಶ್ರೀ

Ravi Talawar
ಗುರುಗಳನ್ನು ನೆನೆದು ಅವರಿಗೆ ವಂದನೆ ಅರ್ಪಿಸುವದು ಮಹಾ ಕಾರ್ಯ:ಚಿದಾನಂದ ಶ್ರೀ
WhatsApp Group Join Now
Telegram Group Join Now
ನೇಸರಗಿ. ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ್ ಪರಬ್ರಹ್ಮ ಎನ್ನುವ ಮಾತಿನಂತೆ ಇಂದು ನೀವೆಲ್ಲ 1989-90 ರಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಲ್ಲ ವಿಭಾಗಳಲ್ಲಿ ಕೆಲಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದು ಇಂದು ಕಲಿತ ಶಾಲೆ ಮತ್ತು ಕಳಿಸಿದ ಶಿಕ್ಷಕರಿಗೆ ಸನ್ಮಾನ ಮಾಡಿದ ನೀವುಗಳು ಪುಣ್ಯವಂತರು ಎಂದು ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹೇಳಿದರು.
   ಅವರು   ರವಿವಾರದಂದು ಗ್ರಾಮದ ವಿದ್ಯಾಮಂದಿರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದ್ದ 1989-90 ನೇ ಸಾಲಿನ ವಿದ್ಯಾರ್ಥಿಗಳಿಂದ 4 ನೇ ವರ್ಷದ ಸ್ನೇಹಕೂಟ ಹಾಗೂ   ಗುರುವಂದನಾ

ಕಾರ್ಯಕ್ರಮದಲ್ಲಿ ಮಾತನಾಡಿದರು.
     ನಿವೃತ್ತ ಶಿಕ್ಷಕ ಸಿ ವಿ ಕಟ್ಟಿಮನಿ ಮಾತನಾಡಿ ವಿದ್ಯಾರ್ಥಿಗಳು ಎಷ್ಟೇ ದೊಡ್ಡವರಾದರು ಶಿಕ್ಷಕರಿಗೆ ಕೊಡುವಷ್ಟು ಗೌರವ ಯಾರಿಗೂ ಕೊಡುವದಿಲ್ಲ ವ್ಯಾಸಂಗ ಸಮಯದಲ್ಲಿ ಅವರು ಕಳಿಸಿದ ಪಾಠ ಸದಾ ನೆನಪು  ಇರುತ್ತದೆ. ಆದರೆ ಈ ನಮ್ಮ 1989-90 ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ಸತತ 4 ವರ್ಷಗಳಿಂದ ನಮ್ಮನ್ನು ಸತ್ಕರಿಸುತ್ತಿರುವದು ನಮಗೆ ಹೆಮ್ಮೆ ತರಿಸಿದೆ ಎಂದರು.
  ನಿವೃತ್ತ ಶಿಕ್ಷಕರಾದ ಜಿ ಆರ್ ಕುಲಕರ್ಣಿ, ಉಪನ್ಯಾಸಕರಾದ ರಾಯನಗೌಡ ಮರಿಗೌಡ, ಶಾಲೆಯ ಮುಕ್ಯೋಪಾಧ್ಯಾಯರಾದ ಫಾ. ಹ್ಯಾರಿ ವಿಕ್ಟರ್ ದಿಕ್ರುಜ್ ಮಾತನಾಡಿ  ವಿದ್ಯಾರ್ಥಿಗಳ ಈ ಸುಮಧುರ ಕಾರ್ಯಕ್ರಮದಲ್ಲಿ ನಮ್ಮನ್ನು ಗೌರವಿಸುತ್ತಿರುವದು ಬಹಳ ಖುಷಿಯಾಗಿದೆ ಮತ್ತು ಮುಂದೆ ತಮ್ಮ ಜೀವನ ಸದಾ ಸುಖ ಸಂತೋಷದಿಂದ ಸಾಗಲಿ ಶಾಲೆ ಅಭಿವೃದ್ಧಿಗೆ ಸಹಾಯ ಸಹಕಾರವನ್ನು ಈ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ  ಎಂದರು.
   ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಸ್ ಎಸ್ ಅಪ್ಪಾಜಿಗೋಳ,  ಶ್ರೀಮತಿ ಎಸ್ ಎಮ್ ವನಹಳ್ಳಿ, ಎ ಆರ್ ಕುಲಕರ್ಣಿ, ಎ ಬಿ ಉಪ್ಪಾರ, ಹಾಗೂ ಪ್ರಭಾಕರ ಸತ್ತಿಗೇರಿ, ಹಣಮಂತ ಹಳೆಮನಿ ಮತ್ತು 1989-90 ನೇ ಸಾಲಿನ ವಿದ್ಯಾರ್ಥಿಗಳಾದ ಸುರೇಶ ನವಲಗಟ್ಟಿ, ಯಲ್ಲನಗೌಡ ದೊಡ್ಡಗೌಡರ, ಮಲ್ಲೇಶ ಹುಲಮನಿ, ಸಂಜಯ ಸರಾಫ,ಶಿವನಗೌಡ ಪಾಟೀಲ , ಮಹಾಂತೇಶ್ ಮಾಸ್ತಮರಡಿ, ವಿಠ್ಠಲ ಕಮತಗಿ, ಬಸವರಾಜ ಸಾಣಿಕೊಪ್ಪ, ವಿಜಯ ಸೋಮಣ್ಣವರ,ಮಹಾಂತೇಶ ಚರಂತಿಮಠ,ನ್ಯಾಯವಾದಿ  ಶೀತಲ ಕಾಡಣ್ಣವರ, ಗಂಗಾಧರ ಕಾಜಗಾರ,ಶ್ರೀಮತಿ ಎಮ್ ಆರ್ ಬಾಗೇವಾಡಿ, ಶ್ರೀಮತಿ ವೀಣಾ ಪಾಟೀಲ, ಶ್ರೀಮತಿ ಕಮಲಾ ಪಾಟೀಲ  ಸೇರಿದಂತೆ 1989-90 ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕಿ ಶ್ರೀಮತಿ ಉಷಾ ನವಲಗಟ್ಟಿ ನೆರವೇರಿಸಿದರೆ, ಸ್ವಾಗತ ವಂದನೆಯನ್ನು ಮಹಾವೀರ ಬಿಲ್, ಮಾರುತಿ ಒಣವೆ, ಮಲ್ಲೇಶ ಯರಗುದ್ದಿ  ವಂದನೆ, ಸತ್ಕಾರ  ನೆರವೇರಿಸಿದರು.
WhatsApp Group Join Now
Telegram Group Join Now
Share This Article