ಪಾಕಿಸ್ತಾನದ 10 ಸೇನಾಧಿಕಾರಿಗಳನ್ನು ಬಲಿ ಪಡೆದ ಬಲೂಚ್ ಲಿಬರೇಶನ್ ಆರ್ಮಿ

Ravi Talawar
ಪಾಕಿಸ್ತಾನದ 10 ಸೇನಾಧಿಕಾರಿಗಳನ್ನು ಬಲಿ ಪಡೆದ ಬಲೂಚ್ ಲಿಬರೇಶನ್ ಆರ್ಮಿ
WhatsApp Group Join Now
Telegram Group Join Now

ಬಲೂಚಿಸ್ತಾನ, ಏ.26: ಪಾಕಿಸ್ತಾನದ 10 ಸೇನಾಧಿಕಾರಿಗಳನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಲಿ ಪಡೆದಿದೆ. ಶುಕ್ರವಾರ ಬಲೂಚಿಸ್ತಾನದ  ಕ್ವೆಟ್ಟಾದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ಐಇಡಿ ದಾಳಿಯಲ್ಲಿ ಹತ್ತು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ .ಕ್ವೆಟ್ಟಾದ ಮಾರ್ಗತ್‌ನಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ ನಡೆಸಲಾಗಿದೆ. ಈ ದಾಳಿಯನ್ನು ಹೊಣೆಯನ್ನು ಹೊತ್ತಿದ್ದು, ನಾವೇ ಈ ದಾಳಿಯನ್ನು ನಡೆಸಿದ್ದೇವೆ. ಪಾಕ್​ ಸೇನೆಯ ಮೇಲೆ ದಾಳಿ ಮಾಡಲು ತನ್ನ ಯೋಧರಿಗೆ ರಿಮೋಟ್-ಕಂಟ್ರೋಲ್ಡ್ ಸಾಧನ ನೀಡಲಾಗಿತ್ತು. ಇದನ್ನು ಬಳಸಿಕೊಂಡು ಪಾಕ್ ಸೇನಾ ಬೆಂಗಾವಲು ಪಡೆಯನ್ನು ಬಲಿ ಪಡೆದಿದ್ದೇವೆ ಎಂದು ಹೇಳಿದೆ. ನಮ್ಮ ಶತ್ರುಗಳನ್ನು ನಾಶ ಮಾಡುವುದು ನಮ್ಮ ಉದ್ದೇಶವಾಗಿತ್ತು ಅದನ್ನು ನಾವು ಮಾಡಿದ್ದೇವೆ ಎಂದು ಹೇಳಿದೆ.

ಸುಬೇದಾರ್ ಶೆಹಜಾದ್ ಅಮೀನ್, ನೈಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಾಮ್ ಸಲೀಮ್ ಮತ್ತು ಇತರ ಸೈನಿಕರು ಸೇರಿದಂತೆ ಒಟ್ಟು 10 ಜನರನ್ನು ಬಲಿ ಪಡೆದಿದ್ದೇವೆ ಎಂದು ಬಿಎಲ್‌ಎ ವಕ್ತಾರ ಜಿಯಾಂಡ್ ಬಲೂಚ್ ಹೇಳಿಕೆ ನೀಡಿದ್ದಾರೆ. ಇದು ಅವರಿಗೆ ಕೇವಲ ಎಚ್ಚರಿಕೆ ಅಷ್ಟೇ, ಮುಂದಿನ ದಿನಗಳಲ್ಲಿ ಈ ಕಾರ್ಯಚರಣೆ ಇನ್ನು ತೀವ್ರವಾಗಿರುತ್ತದೆ. ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಏನು ಬೇಕಾದರೂ ಮಾಡುತ್ತೇವೆ ಎಂದು ಪಾಕ್​​​ಗೆ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article