ಶಿವಮೊಗ್ಗ, ಏಪ್ರಿಲ್ 24: ಮಂಗಳವಾರ ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಬಂದ ಭಯೋತ್ಪದಕರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ (Manjunath Rao) ಅವರ ಮೃತದೇಹ ಇಂದು ಬೆಳಗ್ಗೆ ವಿಮಾನವೊಂದರಲ್ಲಿ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಅಂಬ್ಯುಲೆನ್ಸ್ ನಲ್ಲಿ ಶಿವಮೊಗ್ಗಗೆ ತರಲಾಯಿತು. ಅವರ ದೇಹ ಬರುತ್ತಿರುವ ಸುದ್ದಿ ಕೇಳಿದ ಜನರು ರಸ್ತೆಗಳಲ್ಲಿ ನೆರೆದು ತಮಗೆ ತಿಳಿದ ರೀತಿಯಲ್ಲಿ ಅಂತಿಮ ನಮನ ಸಲ್ಲಿಸಿದರು. ಕೆಲ ಜನ ಬೈಕ್ಗಳಲ್ಲಿ ಅಂಬ್ಯುಲೆನ್ಸ್ ಹಿಂಬಾಲಿಸಿದರು. ಮಂಜುನಾಥ್ ಮತ್ತು ಭರತ್ ಭೂಷಣ್ ಅವರ ಮೃತದೇಹಗಳು ದೆಹಲಿಯಿಂದ ಬೆಂಗಳೂರುಗೆ ಬೆಳಗ್ಗೆ 6ಗಂಟೆಗೆ ಆಗಮಿಸಿದವು.