ಗ್ರಾಮೀಣ ಕ್ಷೇತ್ರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ

Ravi Talawar
ಗ್ರಾಮೀಣ ಕ್ಷೇತ್ರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ
WhatsApp Group Join Now
Telegram Group Join Now
ಬೆಳಗಾವಿ :   ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಿಂದ ಮೊದಗಾ ಗ್ರಾಮದ (ಕ್ಷೇತ್ರದ ಹದ್ದಿಯ) ವರೆಗಿನ ರಸ್ತೆ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಯುವಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಬುಧವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
 ನಂತರ, ಬಸ್ಸಾಪುರ ಗ್ರಾಮದ ಅಪ್ಪಣ್ಣ ಕರಡಿ ಇವರ ಮನೆಯಿಂದ ಹುಲಿಕಟ್ಟಿ ಜನತಾ ಪ್ಲಾಟ್ ವರೆಗಿನ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಸೇರಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ವೇಳೆ ಎನ್.ಸಿ. ಬಾಗೇವಾಡಿ, ಚಂಬಣ್ಣ ಉಳ್ಳಾಗಡ್ಡಿ, ಸಿದ್ದು ಪಾಟೀಲ, ಸುರೇಶ ಇಟಗಿ, ಅಡಿವೇಶ ಇಟಗಿ, ನಿಂಗಪ್ಪ ತಳವಾರ, ರವಿ ಬಾಗೇವಾಡಿ, ಚಂದ್ರಶೇಖರ ಚಚಡಿ, ಅಮಿತ್ ಕೋಶಾವರ್, ರಾಜೇಂದ್ರ ಬಾಗೇವಾಡಿ, ರಾಜಶ್ರೀ ಉಳೆಗಡ್ಡಿ, ವಿಜಯಲಕ್ಷ್ಮಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಇದಾದ ನಂತರ ಹಿರೇಬಾಗೇವಾಡಿ ಗ್ರಾಮದ ಹಳ್ಳೂರ್ ಬಸವಣ್ಣ ದೇವಸ್ಥಾನದಿಂದ ನಾಲೆಯವರೆಗಿನ ರಸ್ತೆ, ಗ್ರಾಮದ ಜಾಲಿಕರೆಮ್ಮ ದೇವಿ ದೇವಸ್ಥಾನದ ಹಿಂದಿನ ಆಗಮ ಪೆಟ್ರೋಲ್ ಪಂಪ್ ನಿಂದ ಸೋಮಯ್ಯ ಜಂಬಿಗಿ ಮನೆಯವರೆಗಿನ ರಸ್ತೆ ಹಾಗೂ ಸ್ವಾಮಿ‌ ವಿವೇಕಾನಂದ ನಗರದ ಮೆಟಗಾರ ಮನೆಯಿಂದ ಪಡೆಪ್ಪ ಇಂಚಲ ಮನೆಯವರೆಗಿನ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಭೂಮಿ ನೆರವೇರಿಸಿ, ಚಾಲನೆ ನೀಡಿದರು.
Hide quoted text
ಈ ವೇಳೆ ಜಾಲೆಕರೆಮ್ಮ ದೇವಿಯ ಆರಾಧಕರಾದ ಉಳವಪ್ಪ ಅಜ್ಜನವರು, ದರ್ಗಾದ ಖಾದ್ರಿ ಅಜ್ಜನವರು, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಜಯಶ್ರೀ ಜಪ್ತಿ, ಉಪಾಧ್ಯಕ್ಷರಾದ ಶೃತಿ ಸಿದ್ದಣನವರ್, ಗೌಸಮೊದ್ದಿನ್ ಜಾಲಿಕೊಪ್ಪ, ಆನಂದ ಪಾಟೀಲ, ಶ್ರೀಕಾಂತ್ ಮಾಧುಭರಮಣ್ಣವರ, ಸುರೇಶ್ ಇಟಗಿ, ರವಿ ಗಾಣಗಿ, ನಿಂಗಪ್ಪ ತಳವಾರ, ಸ್ವಾತಿ ಇಟಗಿ, ಪಡಿಗೌಡ ಪಾಟೀಲ, ಖತಾಲ್ ಗೋವೆ, ರಾಘು ಪಾಟೀಲ, ಸುಧೀರ್ ಯಲಿಗಾರ್, ಅಡಿವೆಪ್ಪ ತೋಟಗಿ, ವಾಯ್.ಎಲ್.ಪಾಟೀಲ, ಬಸನಗೌಡ ಪಾಟೀಲ್, ಮಂಜುನಾಥ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article