ಬೆಳಗಾವಿ.ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಜಗದೀಶ್ ಶೆಟ್ಟರ ಅವರ ಶಿಫಾರಸ್ಸಿನ ಮೇರೆಗೆ ಬಿ.ಎಸ್.ಎನ್.ಎಲ್ ಜಿಲ್ಲಾ ದೂರವಾಣಿ ಸಲಹಾ ಸಮಿತಿಗೆ ಅಶೋಕ್ ರಾಮಚಂದ್ರ ದೇಶಪಾಂಡೆ, ಪ್ರಶಾಂತ ಮಹಾದೇವ ಅಮ್ಮಿನಭಾವಿ,ಜಯಗೌಡ ಗಾನಪ್ಪ ಪಾಟೀಲ, ಶೈಲೇಶ ಶೆಟ್ಟಿ, ಗುರುಪಾದಪ್ಪ ಮಲ್ಲಿಕಾರ್ಜುನಪ್ಪ ಮೆಳವಂಕಿ, ಪ್ರಧಾನಿ ಭೀಮಪ್ಪ ಕಳಸನ್ನವರ ಅವರು ಆಯ್ಕೆಯಾಗಿದ್ದಾರೆ ಆಯ್ಕೆಯಾದ ಎಲ್ಲರಿಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಜಗದೀಶ ಶೆಟ್ಟರ ಅವರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.