ಪಾಶ್ಚಾಪೂರ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರಮಹೋತ್ಸವ ಸಂಪನ್ನ. 

Ravi Talawar
ಪಾಶ್ಚಾಪೂರ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರಮಹೋತ್ಸವ ಸಂಪನ್ನ. 
WhatsApp Group Join Now
Telegram Group Join Now
ಬೆಳಗಾವಿ. ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕುಂದರನಾಡಿನ  ಪಾಶ್ಚಾಪೂರ ಗ್ರಾಮದಲ್ಲಿ    ಕಮತಗಿ ಯವರ ಮನೆ ತನದಲ್ಲಿ ಶ್ರೀ ಆದಿಶಕ್ತಿ ದೇವಿ ಜಗ್ನಮಾತೆ ಶ್ರೀ ಯಲ್ಲಮ್ಮ ದೇವಿ ನೇಲಿಸಿರುತ್ತಾಳೆ.
ಈ ಪವಿತ್ರವಾದ ಪುಣ್ಯ ಸ್ಥಳದಲ್ಲಿ ಶ್ರೀ ಜಗ್ನಮಾತೆ  ಆದಿಶಕ್ತಿ ದೇವಿಯ ಜಾತ್ರಮಹೋತ್ಸವಕ್ಕೆ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ಆಪ್ತ  ಅಭಿಮಾನಿಗಳಾದ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ  ಶ್ರೀ ಸಂದೇಶ ಬಿ. ರಾಜಮಾನೆ ಅವರು ಆಗಮಿಸಿ ಜಾತ್ರಮಹೋತ್ಸ ಕಾರ್ಯಕ್ರಮಕ್ಕೆ ಚಾಲನೆ   ನೀಡಿದರು.
 ಈ ಜಾತ್ರ ಮಹೋತ್ಸವ ಕಾರ್ಯಕ್ರಮಕ್ಕೆ ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಶೃದ್ಧಾ ಭಕ್ತಿ ವಿಶ್ವಾಸದಿಂದ ಬಂದು  ತನು ಮನ ಧನ ನೀಡಿ ದೇವಿಯ ಕೃಪಾ  ಆಶೀರ್ವಾದ ಕ್ಕೆ ಪಾತ್ರರಾದರು.
 ಶ್ರೀಮತಿ ಕಾಶವ್ವಾ ಕಮತಗಿ ಅವರ ಮೊಮ್ಮಗನಾದ ಮಲ್ಲಿಕಾರ್ಜುನ ಲ. ಕಮತಗಿ ದೇವಿಯ ಅರ್ಚಕರು ಇವರು ಸುಮಾರು ಜಾತ್ರಮಹೋತ್ಸ ಕಾರ್ಯಕ್ರಮದ ಮೊದಲು ಸುಮಾರು  5 ದಿನಗಳ ಕಾಲ ಎಳನೀರು ಮಾತ್ರ ಸೇವಿಸಿ ನಿರಂತರ 5 ದಿನಗಳ ಕಾಲ ಉಪವಾಸ ಮಾಡುತಾರಂತೆ.
 ಜಾತ್ರಮಹೋತ್ಸ ಮಹೋತ್ಸವ  ಕಾರ್ಯಕ್ರಮಕ್ಕೆ ಆಗಮಿಸಿರುವ ಸಕಲ ಭಕ್ತಾದಿಗಳಿಗೆ ಮಹಾ ಪ್ರಸಾದದ ವ್ಯವಸ್ಥೆಯನ್ನು ಗ್ರಾಮದ ಗುರು ಹಿರಿಯರ ಭಕ್ತಾಧಿಗಳು ಹಮ್ಮಿಕೊಂಡಿರುತ್ತಾರೆ.
  ಶ್ರೀ. ಮಲ್ಲಿಕಾರ್ಜುನ ಲ. ಕಮತಗಿ  ಇವರು ಕುದಿಯುವ ಪಾಯಸದಲ್ಲಿ  ದೇವಿಯ  ಅರ್ಚಕರು ಇವರು ತಮ್ಮ ಹಸ್ತಗಳನ್ನು ಹಾಕಿ ದೇವಿಗೆ ನೈವೇದ್ಯ ತೋರಿಸಿದ ನಂತರ ಅರ್ಚಕರು ಪ್ರಸಾದವನ್ನು     ಮಾಡುತ್ತಾರೆ.
  ಶೃದ್ದಾ  ಭಕ್ತಿ ವಿಶ್ವಾಸದಿಂದ  ಅವರು ಮಾಡುವ  ಜಪ ತಪ ಪೂಜೆ ಪುರಸ್ಕಾರವನ್ನು ಮೆಚ್ಚಿ ಅವರ ಮನೆಯಲ್ಲಿ ನೆಲಿಸಿರುತ್ತಾಳೆ.
ಸಕಲ ಭಕ್ತಾದಿಗಳು ಸೇರಿ 4 ವರ್ಷಗಳ ಹಿಂದೆ  ಹೊಸ ಮಂದಿರವನ್ನು ನಿರ್ಮಾಣ  ಮಾಡಿರುತ್ತಾರೆ.
  ಪಾಶ್ಚಾಪೂರ   ಗ್ರಾಮದ ಶ್ರೀ  ಯಲ್ಲಮ್ಮ ದೇವಿ  ದರ್ಶನಕ್ಕೆ ಬರುವ ಸಕಲ ಭಕ್ತಾಧಿಗಳಿಗೆ ಬೆನ್ನು ಹಿಂದೆ ನಿಂತು ಬರುವ ಕಷ್ಟ  ಕಾರ್ಪನ್ಯಗಳನ್ನು  ದೂರು ಮಾಡಿ ಕಾಪಾಡುತ್ತಾಳೆ ವೆಂಬುದು ಗುರು ಹಿರಿಯರ ಕಾಲದಿಂದಲೂ ಬಂದಿರುವ ನಂಬಿಕೆ ಇದೆ.
ಇದೇ ಬರುವ ಎಪ್ರೀಲ್ ತಿಂಗಳಲ್ಲಿ ಬರುವ ದಿನಾಂಕ 18/4/2025 ರಂದು  ಸಲ್ಲವು ಶುಭ ಮೂಹೂರ್ತ ದಲ್ಲಿ ಶ್ರೀ ಯಲ್ಲಮ್ಮಾ ದೇವಿಯ  ಹೋಮ ಹವನ  ಉಡಿ ತುಂಬವು ಕಾರ್ಯಕ್ರಮವನ್ನು  ಅದ್ದೂರಿಯಾಗಿ ನಡೆದಿರುತ್ತದೆ.
 ನಂತರ ಅದೇ ದಿನ   ರಾತ್ರಿ 9:00 ಗಂಟೆಗೆ ಚೌಡಕಿ ಪದಗಳು ಅದ್ದೂರಿಯಾಗಿ ನಡೆಯಿತು.  ಗೂಡ ಗ್ರಾಮದಿಂದ ಶರಮವ್ವಾ ದೇವರೆಶಿ ಸೀತವ್ವಾ ದೇವರೇಶಿ ನಿಕ್ಕಿತಾ ನಗನಾಳ ರಾಮ ದೇವರೆಶಿ ಮಲ್ಲಿಕಾರ್ಜುನ ದೇವರೆಶಿ  ಭೀಮವ್ವಾ ದೇವರೇಶಿ ಮಹಾದೇವಿ ದೇವರೇಶಿ    ಶಿವಕ್ಕಾ ದೇವರೆಶಿ
ಮಹಾತ್ಮರು ಸಾಧು ಸಂತರು ಆಗಮಿಸಿದರು. ಅದಲ್ಲದೇ
ಗಣ್ಯ ಮಾನ್ಯರು ಆಗಮಿಸಿ
ಶ್ರೀ ಯಲ್ಲಮ್ಮ ದೇವಿಯ ಜಾತ್ರಮಹೋತ್ಸವ ಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ   ಬೇರೆ ಬೇರೆ ಜಿಲ್ಲೆಯ ಬೇರೆ ಬೇರೆ ರಾಜ್ಯದ ಭಕ್ತಾದಿಗಳು  ಆಗಮಿಸಿ ಶ್ರೀ ಯಲ್ಲಮ್ಮಾ ದೇವಿ ಯ ಕೃಪಾ ಆಶೀರ್ವಾದ ಕ್ಕೆ ಪಾತ್ರರಾಗಿರುತ್ತಾರೆ.
ಅದಲ್ಲದೆ ಬೆಳಗಾವಿ ಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಶ್ರೀ. ರವಿ ಕೆ. ತಳವಾರ ಇವರು ಕೊಡಾ ದೇವಿಯ ಜಾತ್ರಮಹೋತ್ಸ ಕ್ಕೆ ಆಗಮಿಸಿ ಶ್ರೀ ದೇವಿಯ ಕೃಪಾ ಆಶೀರ್ವಾದ ಕ್ಕೆ ಪಾತ್ರರಾದರು.
WhatsApp Group Join Now
Telegram Group Join Now
Share This Article