ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಮಕ್ಕಳು, ಗರ್ಭಿಣಿಯರು, ಎಳೆ ಮಕ್ಕಳಿಗೆ ಹಾಲುಣಿಸುವ ತಾಯಂದಿರು ಮತ್ತು ಹದಿಹರೆಯದ ಹೆಣ್ಣುಮಕ್ಕಳಿಗೆ ನೀಡಲಾಗುವ ಪೂರಕ ಪೌಷ್ಟಿಕಾಂಶ ಆಹಾರಗಳಲ್ಲಿ ಸಂಸ್ಕರಿಸಿದ ಸಕ್ಕರೆ, ಕೊಬ್ಬು, ಉಪ್ಪು ಮತ್ತು ಸಕ್ಕರೆ (HFSS) ಅಧಿಕವಾಗಿರುವ ಆಹಾರಗಳು, ಸಂರಕ್ಷಕಗಳು, ಬಣ್ಣಗಳು ಮತ್ತು ಸುವಾಸನೆಗಳನ್ನು ಬಳಸದಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (WCD) ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಬಾಲಕಿಯರಿಗೆ ನೀಡಲಾಗುವ ಟೇಕ್ ಹೋಮ್ ರೇಷನ್ಸ್ (THR) ಮತ್ತು ಬಿಸಿ-ಬೇಯಿಸಿದ ಊಟ (HCM) ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಮತ್ತು ಇತರ ವಸ್ತುಗಳನ್ನು ಒಳಗೊಂಡಿರುವುದನ್ನು ಕಂಡುಕೊಂಡ ನಂತರ ಈ ಸೂಚನೆ ನೀಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹೊರಡಿಸಿದ ವಿವರವಾದ ಸಲಹೆಯ ಪ್ರತಿಯು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಮಿಷನ್ ಪೋಷನ್ 2:0 ಅಡಿಯಲ್ಲಿ ವಿವಿಧ ವರ್ಗದ ಫಲಾನುಭವಿಗಳಿಗೆ ಹೆಚ್ ಸಿಎಂ ಮತ್ತು ಟಿಹೆಚ್ ಆರ್ ನ್ನು ಒದಗಿಸುವಾಗ, ರಾಜ್ಯಗಳು ಸಂಸ್ಕರಿಸಿದ ಸಕ್ಕರೆಯನ್ನು ಬಳಸಬಾರದು, ಅಗತ್ಯವಿದ್ದರೆ ಸಿಹಿಗೊಳಿಸಲು ಬೆಲ್ಲವನ್ನು ಮಾತ್ರ ಬಳಸಬೇಕು ಎಂದು ಹೇಳಿದೆ.