ಧಾರವಾಡ : ಧಾರವಾಡ ಪಶ್ಚಿಮ ಕ್ಷೆತ್ರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯನ್ನು ಗೀತಾ ತಾವಂಶಿ ಅವರ ಅದ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಜರುಗಿತು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಕುರಿತು ಇಲಾಖಾವಾರು ಅಧಿಕಾರಿಗಳು ವಿವರಿಸಿದರು.
ಗೃಹ ಲಕ್ಷ್ಮೀ ಯೋಜನೆ ಅಡಿ ಸಲ್ಲಿಸಿದ ಅರ್ಜಿಗಳಲ್ಲಿ ಎಲ್ಲರಿಗೂ ಹಣ ಬರುತ್ತಿವೆ. ಬಾಕಿ ಇರುವ 95 ಜನರಿಗೆ ಐಟಿ, ಜಿಎಸ್‍ಟಿ, ಕೆವೈಸಿ ಕಾರಣಗಳಿಂದ ಬಾಕಿ ಉಳಿದಿರುವ ಕುರಿತು ಚರ್ಚಿಸಲಾಯಿತು. ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗುವ ಪಡಿತರದ ದುರಪಯೋಗ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಗೀತಾ ತಾವಂಶಿ ಅವರು ಹೇಳಿದರು.
ಸಭೆಯಲ್ಲಿ ಅನ್ನಭಾಗ್ಯ ಯೋಜನೆ ಬಗ್ಗೆ ಚರ್ಚಿಸಲಾಯಿತು. ಶಕ್ತಿ ಯೋಜನೆ ಬಗ್ಗೆ ಅಧಿಕಾರಿ ಬಸವರಾಜ ತೇರದಾಳ ಗೃಹ ಜ್ಯೋತಿ ಯೋಜನೆ ಬಗ್ಗೆ ಹೆಸ್ಕಾಂ ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಸಿದ್ದೇಶ್ವರ.ರಾ.ಕಾರದಕಟ್ಟಿ, ಇರ್ಷಾದ ಬಯಕದಾರ, ಗೌಸ ನವಲೂರ. ಭರಮಪ್ಪ ಬಂಗಾರಿ. ರಾಜು ಚಲವಾದಿ, ತ್ರಿಸಿಲಾ ಜೈನ್, ಸುನಂದಾ ಕೋಲಕರ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಅವರು ಭಾಗವಹಿಸಿದ್ದರು.