ವಿವಾದಾತ್ಮಕ ಕಾಲುವೆ ಯೋಜನೆ; ರದ್ದತಿಗೆ ಬಿಲಾವಲ್‌ ಆಗ್ರಹ; ಬೆಂಬಲ ವಾಪಸ್ಸಾತಿಯ ಎಚ್ಚರಿಕೆ !

Ravi Talawar
ವಿವಾದಾತ್ಮಕ ಕಾಲುವೆ ಯೋಜನೆ; ರದ್ದತಿಗೆ ಬಿಲಾವಲ್‌ ಆಗ್ರಹ; ಬೆಂಬಲ ವಾಪಸ್ಸಾತಿಯ ಎಚ್ಚರಿಕೆ !
WhatsApp Group Join Now
Telegram Group Join Now

ಇಸ್ಲಾಮಾಬಾದ್​(ಪಾಕಿಸ್ತಾನ): ವಿವಾದಾತ್ಮಕ ಕಾಲುವೆ ಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಪಾಕಿಸ್ತಾನ ಪೀಪಲ್ಸ್​ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್​ ಭುಟ್ಟೋ ಜರ್ದಾರಿ, ಈ ಯೋಜನೆಯನ್ನು ರದ್ದುಗೊಳಿಸದಿದ್ದರೆ, ಆಡಳಿತ ಪಕ್ಷದ ಮೈತ್ರಿಯಿಂದ ಬೆಂಬಲ ಹಿಂಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನ ಸರ್ಕಾರವು ಪ್ರಸ್ತಾವಿತ ಕಾಲುವೆ ಉಪಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಆಡಳಿತ ಒಕ್ಕೂಟದಿಂದ ಪಿಪಿಪಿ ಬೆಂಬಲ ಕಳೆದುಕೊಳ್ಳುವ ಅಪಾಯ ಎದುರಿಸಬೇಕಾದೀತು ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.

ಪಾಕ್​ ಸಂಸತ್​​ನ 264 ಶಾಸಕಾಂಗ ಸ್ಥಾನಗಳಲ್ಲಿ ಪಿಎಂಎಲ್​ಎನ್​ 79 ಸ್ಥಾನಗಳನ್ನಷ್ಟೇ ಪಡೆದುಕೊಂಡಿದ್ದು, ಪಿಪಿಪಿ 54 ಸ್ಥಾನಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಹಬಾಜ್​ ಷರೀಫ್​ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಪಿಪಿಪಿಯ ಬೆಂಬಲ ನಿರ್ಣಾಯಕವಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್), ಪಿಪಿಪಿ ಮತ್ತು ಇತರ ನಾಲ್ಕು ಸಣ್ಣ ಪಕ್ಷಗಳ ಜೊತೆ ಸೇರಿ ಬಹುಮತ ಸಾಧಿಸಿ, ಆಡಳಿತದಲ್ಲಿದೆ. ಆದರೆ, 93 ಸ್ಥಾನಗಳನ್ನು ಹೊಂದಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ವಿರೋಧ ಪಕ್ಷದ ಸ್ಥಾನದಲ್ಲಿದೆ.

WhatsApp Group Join Now
Telegram Group Join Now
Share This Article