ಬಳ್ಳಾರಿ 18 : ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಒಬ್ಬ ಅಪರೂಪದ ವ್ಯಕ್ತಿತ್ವ ಹೊಂದಿರುವ ಹಾಗೂ ಜೀವಕೋಶದಲ್ಲಿರುವ ನ್ಯೂಕ್ಲಿಯಸ್ ಇದ್ದಹಾಗೆ ಸಮಾಜದ ಒಂದು ದೊಡ್ಡ ಶಕ್ತಿ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಎಚ್ ಎಂ ಬಸವರಾಜ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಸರ್ವ ಸಮುದಾಯ ಬಳಗದವರು ಹಮ್ಮಿಕೊಂಡ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತೋತ್ಸವ ಮತ್ತು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ವನ್ನು ಹಲಗೆ ಬಾರಿಸಿ ಉದ್ಘಾಟಿಸಿ ಮಾತನಾಡಿ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಕೊಡದಿದ್ದರೆ ತಳಮಟ್ಟದವರು ಮೇಲ್ಮಟ್ಟಕ್ಕೆ ಬರುತ್ತಿರಲಿಲ್ಲ ದೇಶದ ಉನ್ನತ ಸ್ಥಾನಗಳಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ರಾಷ್ಟ್ರಪತಿ ಪ್ರಧಾನ ಮಂತ್ರಿ ರಾಜ್ಯಪಾಲರು ಮುಖ್ಯಮಂತ್ರಿಗಳು ವಾಯು ವಿಭಾಗ ಜಲ ವಿಭಾಗ ರಕ್ಷಣಾ ವಿಭಾಗದ ಮುಖ್ಯಸ್ಥರುಗಳು ಇವರುಗಳ ಕರ್ತವ್ಯಗಳೇನು ಇವರನ್ನು ಹೇಗೆ ನೇಮಕ ಮಾಡಬೇಕು ಇವರ ಸೇವೆಯ ಅವಧಿ ಎಷ್ಟು ಎಂದು ಸಂವಿಧಾನದಲ್ಲಿ ತಿಳಿಸಿರುತ್ತಾರೆ ಆದರೆ ದುರದಷ್ಟವೆಂದರೆ ತಳಮಟ್ಟದಲ್ಲಿರುವ ಶ್ರೀಮಂತರು ತಮ್ಮ ಕುಟುಂಬದಲ್ಲಿ ಅಧಿಕಾರ ಹಂಚಿಕೊಳ್ಳುತ್ತಾರೆ ಇದನ್ನು ಖಂಡಿಸಬೇಕು ಕೆಳಗಿರುವ ಹಿಂದುಳಿದವರು ಯಾವಾಗ ಮುಂದೆ ಬರಬೇಕು ಸಂವಿಧಾನ ಎಲ್ಲರಿಗೂ ಸಮಬಾಳು, ಸಮಪಾಲು ಎಂದು ತಿಳಿಸುತ್ತದೆ ಸಂವಿಧಾನ ಇರುವುದರಿಂದಲೇ ಎಲ್ಲರೂ ಉನ್ನತ ಸ್ಥಾನ ಗಳಿಸಲು ಸಾಧ್ಯವಾಯಿತು ಇಂಥ ಸಂವಿಧಾನವನ್ನು ಕೊಟ್ಟ ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ನಾವು ಹೃದಯದಲ್ಲಿಟ್ಟು ಪೂಜಿಸಬೇಕು ಬುದ್ಧ ಬಸವ ಅಂಬೇಡ್ಕರ್ ಅವರು ಜಾತಿ ಮೀರಿ ಬೆಳೆದವರು ಎಂದರು.
ಈ ಕಾರ್ಯಕ್ರಮದಲ್ಲಿ
ಎಸ್ ಎಂ ಹುಲುಗಪ್ಪ ಹನುಮಯ್ಯ ಎರ್ರೆಗುಡಿ ಸುಂಕಣ್ಣ ಅಂಬಣ್ಣ ದಳವಾಯಿ ವೀರೇಶ್ ದಳವಾಯಿ ಎರಿಸ್ವಾಮಿಯವರಿಂದ ಕ್ರಾಂತಿ ಗೀತೆಗಳು ಬಸವಣ್ಣನವರ ವಚನಗಳು ರೈತ ಗೀತೆ ತುಂಬಾ ಅದ್ಭುತವಾಗಿ ಮೂಡಿ ಬಂದವು ಶಿಕ್ಷಕ ಯೇಸು ಕಾರ್ಯಕ್ರಮ ನಿರೂಪಿಸಿದರು ಕಲಾವಿದ ಹೆಚ್ ಎರ್ರಿಸ್ವಾಮಿ ಸ್ವಾಗತಿಸಿದರು ಗ್ರಾಮ ಪಂಚಾಯತಿ ಸದಸ್ಯ ಕೋಟೆ ನಾಗರಾಜ್ ಅಧ್ಯಕ್ಷತೆ ಮಾತನಾಡಿದರು ವೇಮನ ಗೌಡ ವಂದಿಸಿದರು ಗೋವಿಂದ ದೇವಿ ರೆಡ್ಡಿ ಅಮರೇಶ್ ಶ್ರೀನಿವಾಸ್ ಪೆನ್ನು ಬಳೇಶಪ್ಪ ಅಗಸರ ಮಲ್ಲೇಶಪ್ಪ ಉಮಾಪತಿ, ರಾಮಣ್ಣ ಭೀಮೇಶ್ವರ ಬಾರಿಕರ ಮಲ್ಲಯ್ಯ ಶರಣಬಸವ ಗೌರಣ್ಣ ತಿಪ್ಪೇಸ್ವಾಮಿ ನರೇಶ್ ರಮೇಶ್ ಇದ್ದರು