ವಿಜಯಪುರ: ಸಿದ್ದರಾಮಯ್ಯ ಬಳಿಕ ಡಿಕೆಶಿ ಪಟ್ಟ ಏರಲು ಕಾಯುತ್ತಿದ್ದಾರೆ. ನವೆಂಬರ್, ಡಿಸೆಂಬರ್ನಲ್ಲಿ ಕಾಂಗ್ರೆಸ್ನಲ್ಲಿ ಮಹಾ ಸ್ಫೋಟವಾಗಲಿದೆಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಅವರು ಹೇಳಿದ್ದಾರೆ.
ಗುರುವಾರ ಬಿಜೆಪಿಯ ಜನಕ್ರೋಶ ಯಾತ್ರೆಯಲ್ಲಿ ಭಾಗವಹಿಸುವ ಮೊದಲು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಅನುಷ್ಠಾನಗೊಳಿಸುವಲ್ಲಿನ ವಿಳಂಬ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯು ಕಾಂತರಾಜ್ ಆಯೋಗ ಸಲ್ಲಿಸಿದ ವರದಿಯ ಉದ್ದೇಶ ಮತ್ತು ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಜಾತಿ ಜನಗಣತಿ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಮೇಲೆ ಆರೋಪ ಬಂದಾಗಲೆಲ್ಲಾ ಜಾತಿ ಜನಗಣತಿ ತರುತ್ತಾರೆ. ಅಧಿಕಾರದಿಂದ ಇಳಿಯುವ ಸಮಯ ಬಂದಾಗಲೆಲ್ಲ ಹೀಗೆ ಮಾಡುತ್ತಾರೆ. ಲಿಂಗಾಯತ, ಒಕ್ಕಲಿಗರು, ದಲಿತರನ್ನು ಒಡೆಯುವ ಹುನ್ನಾರ ಇದು. ಮುಸ್ಲಿಮರನ್ನು ಪ್ರೊಜೆಕ್ಟ್ ಮಾಡಲು ಜಾತಿ ಗಣತಿ ಮಂಡನೆ ಮಾಡಿದ್ದಾರೆ. ಈ ಹಿಂದೆಯೆ ಜಾತಿ ಜನಗಣತಿ ಮಂಡನೆ ಮಾಡಬೇಕಿತ್ತು. ಅಂದಿನಿಂದಲೂ ವಿವಾದಾಸ್ಪದ ವರದಿ ಇದು. ಆಯೋಗ ಮಾಡಿದ್ದೇ ಸಿದ್ದರಾಮಯ್ಯ. ಅಂದು ಯಾಕೆ ಸ್ವೀಕಾರ ಮಾಡಲಿಲ್ಲ? ಅಂದೆ ಕ್ಯಾಬಿನೆಟ್ನಲ್ಲಿ ಇಡಬೇಕಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಆಂತರಿಕ ಯುದ್ಧ ನಡೆಯುತ್ತದೆ. ಸಿದ್ದರಾಮಯ್ಯ ಬಳಿಕ ಡಿಕೆಶಿ ಪಟ್ಟ ಏರಲು ಕಾಯುತ್ತಿದ್ದಾರೆ. ನವೆಂಬರ್, ಡಿಸೆಂಬರ್ನಲ್ಲಿ ಕಾಂಗ್ರೆಸ್ನಲ್ಲಿ ಮಹಾ ಸ್ಫೋಟವಾಗಲಿದೆ. ಟೈಂ ಬಾಂಬ್ ಸ್ಫೋಟವಾಗಲಿದೆ. ಹೀಗಾಗಿ ಅಧಿಕಾರದಲ್ಲಿ ಮುಂದುವರೆಯಲು ಜಾತಿ ಗಣತಿ ವರದಿ ಕುರಿತು ಗೊಂದಲ ಸೃಷ್ಟಿಸಿದ್ದಾರೆ. ಆದರೆ, ಡಿಕೆ.ಶಿವಕುಮಾರ್ ನವೆಂಬರ್ ಅಥವಾ ಡಿಸೆಂಬರ್ಗೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಅದು ಸ್ಫೋಟವಾಗುವ ಸಾಧ್ಯತೆ ಇದೆ ಎಂದರು.