ವಕ್ಫ್‌ ಕಾಯ್ದೆಯ ಕುರಿತು ಸುಪ್ರೀಂ ತೀರ್ಪು ಸ್ವಾಗತಿಸಿದ ವಿಪಕ್ಷಗಳು; ವಕ್ಫ್‌ ವಿರುದ್ಧ ಹೋರಾಟಕ್ಕೆ ನಿರ್ಧಾರ

Ravi Talawar
ವಕ್ಫ್‌ ಕಾಯ್ದೆಯ ಕುರಿತು ಸುಪ್ರೀಂ ತೀರ್ಪು ಸ್ವಾಗತಿಸಿದ ವಿಪಕ್ಷಗಳು; ವಕ್ಫ್‌ ವಿರುದ್ಧ ಹೋರಾಟಕ್ಕೆ ನಿರ್ಧಾರ
WhatsApp Group Join Now
Telegram Group Join Now

ನವದೆಹಲಿ: ವಕ್ಫ್ ಕಾಯ್ದೆಯ ಪ್ರಮುಖ ನಿಬಂಧನೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸ್ವಾಗತಿಸಿದ್ದು, ಸಂವಿಧಾನಬಾಹಿರ ಶಾಸನದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಪಾದಿಸಿವೆ.

ಸುಪ್ರೀಂ ಕೋರ್ಟ್‌ನ ಅವಲೋಕನಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ವಕ್ಫ್ ತಿದ್ದುಪಡಿ ಕಾಯ್ದೆಯು ಕೇವಲ ‘ಕಾನೂನುಬದ್ಧವಾಗಿ ದೋಷಪೂರಿತವಲ್ಲ, ಬದಲಾಗಿ ನೈತಿಕವಾಗಿ ಶೂನ್ಯವಾಗಿದೆ ಮತ್ತು ಅದು ಸಂವಿಧಾನದ ಆತ್ಮದ ಮೇಲೆಯೇ ದಾಳಿ ಮಾಡುತ್ತಿದೆ ಎಂದು ಹೇಳಿದೆ.

ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ, ಕಾನೂನು ಸುಧಾರಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ವಕ್ಪ್ ತಿದ್ದುಪಡಿ ಕಾಯ್ದೆ ದಾಳಿ ಮಾಡುತ್ತದೆ ಮತ್ತು ಸಂವಿಧಾನದ ನಿರ್ಮಾತೃಗಳು ಇದನ್ನು ಊಹಿಸಿರಲಿಲ್ಲವಾದ್ದರಿಂದ ಪಕ್ಷವು ಇದು ಜಾರಿಗೆ ಬರಲು ಬಿಡುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಇಮ್ರಾನ್ ಪ್ರತಾಪ್‌ಗಢಿ, ಈ ಮಹತ್ವದ ವಿಷಯವನ್ನು ಆಲಿಸಲು ಸಮಯ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಅರ್ಪಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಕರಣದಲ್ಲಿ ವಾದ ಮಂಡಿಸಿದ ಅಭಿಷೇಕ್ ಸಿಂಗ್ವಿ, ಸಾಂವಿಧಾನಿಕ ಹಕ್ಕುಗಳು ಬಹುಸಂಖ್ಯಾತರಿಗೆ ವಿರುದ್ಧವಾಗಿವೆ ಎಂಬುದನ್ನು ಜನರು ಮರೆತುಬಿಡುತ್ತಾರೆ ಏಕೆಂದರೆ ಇಲ್ಲದಿದ್ದರೆ ಹಕ್ಕುಗಳ ಅಗತ್ಯವಿರುವುದಿಲ್ಲ ಎಂದಿದ್ದಾರೆ.

WhatsApp Group Join Now
Telegram Group Join Now
Share This Article