ಬಳ್ಳಾರಿ.ಏ. 10: ಮಾಜಿ ಸೈನಿಕರಿಗೆ ಸರ್ಕಾರದಿಂದ ದೊರಯಬೇಕಾದ ಖಾಲಿ ನಿವೇಶನ ಮತ್ತು ಜಮೀನಿನ ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಮಾಜಿ ಸೈನಿಕರಾದ ಪ್ರಹ್ಲಾದ್ ರೆಡ್ಡಿ ಮತ್ತು ಇತರರು ಮನವಿ ಮಾಡಿಕೊಂಡಿದ್ದಾರೆ.
ಅವರು ನಗರ ಶಾಸಕರಾದ ನಾರಾ ಭರತ್ ರೆಡ್ಡಿಗೆ ಅವರ ಕಚೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಸುಮಾರು 4 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸುತ್ತೋಲೆಗಳ ಅನುಸಾರವಾಗಿ ಸೈನಿಕರಿಗೂ ಮತ್ತು ಮಾಜಿ ಅರೆ ಸೈನಿಕರಿಗೂ ಜಮೀನು ಇಲ್ಲವೇ ಖಾಲಿ ನಿವೇಶನ ಕೊಡಬೇಕೆಂದು ಆದೇಶವಿರುತ್ತದೆ ಆದರೆ ಇಲ್ಲಿಯವರೆಗೂ ಬಳ್ಳಾರಿ ಜಿಲ್ಲೆಯ ಅರೆ ಸೈನಿಕರಿಗೆ ಅವು ಲಭ್ಯವಾಗಿಲ್ಲ ಕಾರಣ ಮತ್ತೊಮ್ಮೆ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ, ಸೈನಿಕನ ನಿಷ್ಠೆ ಮತ್ತು ಪ್ರಾಮಾಣಿಕತೆಯ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಾ ಸುಮಾರು 20 ವರ್ಷಗಳ ಕಾಲ ತನ್ನ ಕುಟುಂಬವನ್ನು ನೆಂಟರನ್ನು ಹಾಗೂ ರಾಜ್ಯ ಮತ್ತು ಜಿಲ್ಲೆ ಹಾಗೂ ತಾಲೂಕುಗಳನ್ನು ತೊರೆದು ದಟ್ಟವಾದ ಕಾಡುಗಳಲ್ಲಿ ಹಿಮ ಪರ್ವತಗಳಲ್ಲಿ ತನ್ನ ಪ್ರಾಣವನ್ನು ಮುಡುಪಾಗಿಟ್ಟ ಭಾರತಾಂಬೆಯ ಸೇವೆಯಲ್ಲಿ ತಲ್ಲಿನನಾಗುತ್ತಾನೆ. ಅಷ್ಟೇ ಅಲ್ಲದೆ ಉಗ್ರವಾದಿಗಳು ಹಾಗೂ ನಕ್ಸಲರ ವಿರುದ್ಧ ತನ್ನ ದೇಶಕ್ಕಾಗಿ ಹೋರಾಡುತ್ತಾನೆ ಈ ಸಂದರ್ಭದಲ್ಲಿ ತನ್ನ ಸಹಪಾಠಿಗಳನ್ನು ಸಹ ಕಳೆದುಕೊಳ್ಳುತ್ತಾನೆ, ಸೈನಿಕ ತನ್ನ ಪ್ರಾಣವನ್ನು ಪಣಕ್ಕಿಟ್ಟು 24 ಗಂಟೆ ದೇಶವನ್ನು ಕಾಯುತ್ತಿರುತ್ತಾನೆ. ಸೈನಿಕರ ಈ ಎಲ್ಲಾ ಸಾಧನೆಗಳನ್ನು ಅಧಿಕಾರಿಗಳು ಮತ್ತು ಶಾಸಕರು ಹಾಗೂ ಸಂಸದರು ಗುರುತಿಸಿ ಹಾಗೂ ಕುಲಂಕುಶವಾಗಿ ಪರಿಶೀಲಿಸಿ ಸೈನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಕಲ್ಯಾಣ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾದಂತಹ ಸಿರಿಗೇರಿ ಫನ್ನರಾಜ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಮಾಧವ ರೆಡ್ಡಿ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಮತ್ತು ಉಪಾಧ್ಯಕ್ಷರಾದ ಈಶ್ವರ ರೆಡ್ಡಿ ಸಹ ಕಾರ್ಯದರ್ಶಿಯಾದ ರಾಜಸಿಂಹ ನಿರ್ದೇಶಕರಾದ ಲಕ್ಷ್ಮಣ್ ಮತ್ತು ಶೇಕ್ ಸಾಬ್, ಗೋವಿಂದರಾಜು ವೀರೇಶ್ ಎಂ ಆರ್ ರೆಡ್ಡಿ, ಪ್ರವೀಣ್, ರವಿಕುಮಾರ್ ಇನ್ನು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.