ಬೈಲಹೊಂಗಲ-ತಾಲೂಕಿನ ದೇವಲಾಪುರ ಕ್ರಾಸ್ ಸಮೀಪದ ಪೂಜಾರ(ಹೂಗಾರ) ಅವರ ಜಮೀನಿನಲ್ಲಿ ಉದ್ಭವಗೊಂಡು ಈ ಭಾಗದ ಆರಾಧ್ಯ ದೈವವಾಗಿರುವ ಶ್ರೀ ಕರೆಮ್ಮ ದೇವಿ ಜಾತ್ರಾ ಮಹೋತ್ಸವವು ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಕರೆಮ್ಮ ದೇವಿ ಹಾಗೂ ಕಲ್ಲಿನಲ್ಲಿಯೇ ಸ್ವಯಂ ಆಕಾರಗೊಂಡಿರುವ ಗೌರಿಪುತ್ರ ವಿನಾಯಕನಿಗೆ ಪಂಚಾಮೃತ ಅಭಿಷೇಕ,ರುದ್ರಾಭಿಷೇಕ ಹಾಗೂ ವಿಶೇಷ ಹೂಗಳಿಂದ ಅಲಂಕರಿಸಿ, ಲೋಕ ಕಲ್ಯಾಣಾರ್ಥವಾಗಿ ಘಣಹೋಮ,ನವಗ್ರಹ ಹೋಮ ನೆರವೇರಿಸಿ ನಂತರ ಜೋಗತಿ ಅಮ್ಮನವರಿಗೆ ಪಡ್ಡಲಗಿ ತುಂಬುವ,ಸುಮಂಗಳೆಯರಿಗೆ ಉಡಿ ತುಂಬುವ ಹಾಗೂ ಸಂಕಲ್ಪ ಮಾಡಿಕೊಂಡಿರುವ ಭಕ್ತರಿಂದ ದೀರ್ಘದಂಡ ನಮಸ್ಕಾರ ಸೇವೆ ನಡೆಯಿತು.
ಅಮ್ಮನವರ ಪಲ್ಲಕ್ಕಿ ಉತ್ಸವದ ಬಳಿಕ ಮಹಾಪ್ರಸಾದಕ್ಕೆ ಚಾಲನೆ ನೀಡಲಾಯಿತು. ಬೈಲಹೊಂಗಲ, ದೇವಲಾಪುರ, ಅಮಟೂರ, ಬೇವಿನಕೊಪ್ಪ ಸೇರಿದಂತೆ ವಿವಿಧ ಭಾಗಗಳಿಂದ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳು ತಮ್ಮ ಇಷ್ಟಾರ್ಥಕ್ಕಾಗಿ ಹಾಗೂ ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸಿ ಅಮ್ಮನವರ ದರುಶನ ಪಡೆದು, ಪ್ರಸಾದ ಸವಿದು ಪುನೀತಭಾವ ಹೊಂದಿದರು.