ಧಾರವಾಡ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲೆಯ ಮನಸೂರ ಗ್ರಾಮದಲ್ಲಿ , ಡಾ.ಬಿ.ಡಿ ಜತ್ತಿ ಹೋಮಿಯೋಪಥಿ ಮೆಡಿಕಲ ಕಾಲೇಜ ಸಂಶೋಧನಾ ಕೇಂದ್ರ ಹಾಗೂ ಐನೀಲ ರಕ್ತ ತಪಾಸಣಾ ಕೇಂದ್ರ ವತಿಯಿಂದ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನ ಮಾಜಿಮಹಾಪೌರರು ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಆರೋಗ್ಯಂ ಪರಮಂ ಭಾಗ್ಯಂ ಆರೋಗ್ಯಂ ಸರ್ವಾರ್ಥಸಾಧನಂ ಆರೋಗ್ಯವೆ ಸರ್ವಸ್ವ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಉತ್ತಮ ಆರೋಗ್ಯಕ್ಕಾಗಿ ಸತ್ವಯುತ ಆಹಾರಗಳು, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ-ಬೆಳಕು, ಸ್ವಚ್ಛ ಪರಿಸರ, ನೆಮ್ಮದಿ ಮತ್ತು ಮನರಂಜನೆ ಅತ್ಯಗತ್ಯವಾದದ್ದು. ವಿಶ್ವ ಆರೋಗ್ಯ ದಿನದಂದು, ಪ್ರತಿಯೊಬ್ಬರೂ ಪೌಷ್ಟಿಕ, ಸಾತ್ವಿಕ ಮತ್ತು ನೈಸರ್ಗಿಕ ಆಹಾರವನ್ನು ಆಯ್ದುಕೊಳ್ಳೋಣ ಎಂದರು.
ಆರೋಗ್ಯವನ್ನು ಕಾಪಾಡೋಣ.
ಸಾರ್ವಜನಿಕರಿಗೆ ಆರೋಗ್ಯ ಕುರಿತಾದ ಮಾಹಿತಿ ಮತ್ತು ಮಾರ್ಗದರ್ಶನ ಮಾಡೋನ ಆರೋಗ್ಯದ ಕುರಿತು ಜಾಗ್ರತಿ ಮೂಡಿಸುವ ಸಂಕಲ್ಪ ಮಾಡೋಣ ಹಾಗು ಆರೋಗ್ಯ ಕಾಳಜಿ ಬಗ್ಗೆ ಗಮನ ಹರಿಸೋಣವೆಂದರು.
ಕರ್ನಾಟಕ ವಿಶ್ವವಿದ್ಯಾಲಯ ಮಾಜಿಕುಲಪತಿಗಳು ಡಾ ಪ್ರಮೋದ ಗಾಯಿ ಮಾತನಾಡಿ, ಜನರು ಜಾಗೃತರಾಗಬೇಕು ಆರೋಗ್ಯವೆ ದೊಡ್ಡ ಸಂಪತ್ತು ಆರೋಗ್ಯ ಕಾಪಾಡಿಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ, ಡಾ ಪ್ರಮೋದ ಗಾಯಿ, ಗದಗಯ್ಯ ಹಿರೇಮಠ ಮಲ್ಲನಗೌಡ ಗೌಡ್ರ, ಸಿದ್ದಪ್ಪ ಹಡಪದ, ರಮೇಶ ಕುಂಬಾರ, ಶೇಕಪ್ಪ ಮುಮ್ಮಿಗಟ್ಟಿ ,ಬಸಪ್ಪ ಮೇಟಿ, ಸ್ಥಳಿಯ ಗುರುಹಿರಿಯರು, ಡಾ ಬಿಡಿ ಜತ್ತಿ ಕಾಲೇಜನ ಸಿಬ್ಬಂದಿ ಹಾಗು ಐನೀಲ ತಪಾಸಣಾ ಕೇಂದ್ರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.