ಬೆಳಗಾವಿ: ಪಾಲಭಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಅಭಿಮಾನಿಗಳೊಂದಿಗೆ ರಸ್ತೆ ಪಕ್ಕದಲ್ಲಿರುವ ಚಿಕ್ಕ ಅಂಗಡಿಯಲ್ಲಿ ತಂಪು ಪಾನೀ ಸೇವನೆ ಮಾಡಿ ಸರಳತೆ ಮೆರೆದಿದ್ದಾರೆ. ಹೌದು… ಇಂದು ವಿವಿಧ ಕಾಲುವೆಗಳ ನೀರಿನ ಹರಿವನ್ನು ವೀಕ್ಷಿಸಿ ಪಾಲಭಾವಿಯಲ್ಲಿ ಸಂಚರಿಸುವಾಗ ಚಿಕ್ಕ ದೇಸಿ ತಂಪು ಪಾನೀ ಅಂಗಡಿಗೆ ಭೇಟಿ ಕೊಟ್ಟು ನಿಂಬೆಹಣ್ಣು ಸೋಡಾ ಕುಡಿದು ಸ್ವಲ್ಪ ರಿಲ್ಯಾಕ್ಸ್ ಆದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಮುಖಂಡರು ಇದ್ದರು.