ಧಾರವಾಡ: ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘ ಸುದೀರ್ಘ 50 ವರ್ಷ ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣಿಯ. ನಾವೆಲ್ಲ ಸೇರಿ ಸಮಾಜವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕೆಲಸ ಮಾಡಬೇಕು ಎಂದು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ
ನಗರದ ದೈವಜ್ರ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ನಮ್ಮ ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಯುವ ಪೀಳಿಗೆ ಸರಿಯಾದ ದಾರಿಯಲ್ಲಿ ಸಾಗಬೇಕಿದೆ. ಹೀಗಾಗಿ ಯುವಕರು ಮೊಬೈಲ್ ಫೋನ್, ದುಶ್ಚಟಗಳಿಂದ ದೂರವಿದ್ದು ಸುಸಂಸ್ಕೃತರಾಗಬೇಕು, ಪಾಲಕರು ತಮ್ಮ ಮಕ್ಕಳನ್ನು ಅಧ್ಯಾತ್ಮದಂತಹ ಕಾರ್ಯಕ್ರಮಗಳಿಗೆ ಕರೆ ತರುವ ಮೂಲಕ ಅವರಲ್ಲಿ ಭಕ್ತಿ, ಶ್ರದ್ದೆ ಬೆಳೆಯುವಂತೆ ಮಾಡಬೇಕು’ ಎಂದರು.
ಕೇಂದ್ರ ಸಚಿವ ಪ್ರಬ್ರಾದ ಜೋಶಿ ಮಾತನಾಡಿ, ಒಂದು ಸಂಘ ಸ್ಥಾಪಿಸಿ ವ್ಯವಸ್ಥಿತವಾಗಿ ಮುನ್ನಡೆಸುವುದು ಸವಾಲಿನ ಕೆಲಸ. ಆದರೆ, ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘವನ್ನು ಸಮಾಜದ ಜನರ ಜತೆಗೆ ಉಳಿದ ಸಮಾಜದ ಜನರಿಗೂ ಅನುಕೂಲವಾಗುವ ರೀತಿ ನಡೆಸಿರುವುದು ಶ್ಲಾಘನೀಯ, ಈ ಸಮಾಜ ಕೈಯೊಡ್ಡಿ ಬೇಡಿದ ಸಮಾಜವಲ್ಲ. ಕೈ ಎತ್ತಿ ಕೊಟ್ಟಿರುವ ಸಮಾಜ
ಧಾರವಾಡದ ದೈವಜ್ಞ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ದೀಪಕ ಬೆಂಚೋರೆ, ರವಿ ಗಾಂವಕರ, ಶ್ರೀಧರ ಶೇಟ್, ಉದಯ ರಾಯ್ಕರ, ರಾಮಚಂದ್ರ ಶೇಟ್, ವಸಂತ ಅಣವೇಕರ, ಸಾಯಿರಾಮ ವೆರ್ಣೇಕರ, ಗಜಾನನ ರಾಯ್ಕರ, ಸಂತೋಷ ರಾಯ್ಕರ ಇತರರಿದ್ದರು. ಮುಂದಿನ ದಿನಗಳಲ್ಲಿ ಈ ಸಂಘ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ಎಐಸಿಸಿ ಸದಸ್ಯ ದೀಪಕ ಚಿಂದೋರೆ ಮಾತನಾಡಿ, ‘ಸಮಾಜದ ಎಲ್ಲ ಜನದೂ ಒಟ್ಟಾಗಿ ಸಮಾಜ ಬೆಳೆಸುವ ಕೆಲಸ ಮಾಡಬೇಕು. ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಮಾಜದ ಜನರು ಕಾರ್ಯ ನಿರ್ವಹಿಸುವಂತಾಗಬೇಕು. ಅಂದಾಗ ಮಾತ್ರ ಸಾಮಾಜಿಕವಾಗಿ ಹೆಚ್ಚಿನದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಘದ ಅಧ್ಯಕ್ಷ ರವಿ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕರ್ತಿಯ ಶ್ರೀ
ಜ್ಞಾನೇಶ್ವರಿ ಜ್ಞಾನೇಶ್ವರಿ ದೈವಜ್ಞ ಬ್ರಾಹ್ಮಣ ಮಠದ ಆಸ್ತಿಗಳು, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ದೈವಜ್ಞ ಬ್ರಾಹ್ಮಣ ಸಮಾಜದ ಸಂಘ-ಸಂಸ್ಥೆಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಯ್ಕರ. ಗೌರವ ಕಾರ್ಯದರ್ಶಿ ವಸಂತ ಅಣವೇಕರ, ರಾಮಚಂದ್ರ ಶೇಟ್, ಸಾಯಿರಾಮ ವರ್ಣೇಕರ, ನಿರ್ದೇಶಕರಾದ ಗಜಾನನ ನಾಯ್ಕರ, ಶ್ರೀಧರ ಶೇಟ್, ಸಂತೋಷ ರಾಯ್ಕರ ವಲ್ಲಭಸಾವುಸ್ಯರ, ಅಜಿತ ಗಾಂವಕರ, ಶ್ರೀಕಾಂತ ರಾಯ್ಕರ, ಗಿರೀಶ ಡೊಮ್ಮೆಕರ, ಸೀತಾರಾಮ ದೇವಣಕರ, ಪ್ರಜಾಂಕ ವರ್ಣೇಕರ, ಮಹಿಳಾ ಮಂಡಳ ಪದಾಧಿಕಾರಿಗಳು, ಉಪಸ್ಥಿತರಿದ್ದರು.