ವಿದ್ಯುತ್‌ ಅವಘಡಲ್ಲಿ ಭೀಕರ ಸಾವು; 6 ತಿಂಗಳಲ್ಲಿ 118 ಮಂದಿ ದಾರುಣ ಮರಣ

Ravi Talawar
ವಿದ್ಯುತ್‌ ಅವಘಡಲ್ಲಿ ಭೀಕರ ಸಾವು; 6 ತಿಂಗಳಲ್ಲಿ 118 ಮಂದಿ ದಾರುಣ ಮರಣ
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 7: ಬೆಸ್ಕಾಂ ವ್ಯಾಪ್ತಿಯಲ್ಲಿ ಸಂಭವಿಸಿದ ವಿವಿಧ ವಿದ್ಯುತ್ ಅವಘಡಗಳಲ್ಲಿ ಕಳೆದ ವರ್ಷ ಕೇವಲ ಆರು ತಿಂಗಳಲ್ಲಿ 118 ಮಂದಿ ಮೃತಪಟ್ಟಿದ್ದಾರೆ. ಇದು ಹಿಂದಿನ ದಶಕವೊಂದರಲ್ಲಿ ದಾಖಲಾದ ಸರಾಸರಿ ವಾರ್ಷಿಕ ಸಾವುಗಳಿಗಿಂತ ಎರಡು ಪಟ್ಟು ಹೆಚ್ಚು ಎಂದು ವರದಿಯಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಸುಂಕ ಪರಿಷ್ಕರಣೆ ಪ್ರಸ್ತಾವನೆಯ ಭಾಗವಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಸಲ್ಲಿಸಿದ ವರದಿಯಿಂದ ಈ ಅಂಕಿಅಂಶ ತಿಳಿದುಬಂದಿದೆ. ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಈ ಸಾವುಗಳು ವರದಿಯಾಗಿವೆ. ಆದಾಗ್ಯೂ, ಈ ಅವಘಡಗಳಿಗೆ ಸಾರ್ವಜನಿಕರ ನಿರ್ಲಕ್ಷ್ಯವೇ ಕಾರಣ ಎಂದು ಬೆಸ್ಕಾಂ ಅಧಿಕಾರಿಗಳು ದೂಷಿಸಿದ್ದಾರೆ.

2015-2016 ರಿಂದ 2023-2024 ರ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳನ್ನು ಒಳಗೊಂಡಿರುವ ಬೆಸ್ಕಾಂ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ಸರಾಸರಿ 109.5 ಜನರು ವಿದ್ಯುತ್ ಅಪಘಾತಗಳಲ್ಲಿ ಸಾವನ್ನಪ್ಪಿದ್ದರು. 2024 ರಲ್ಲಿ ಕೇವಲ ಆರು ತಿಂಗಳಲ್ಲಿ (ಏಪ್ರಿಲ್ ನಿಂದ ಅಕ್ಟೋಬರ್) ಆ ಸಂಖ್ಯೆ ದಾಟಿ ಸಾವುಗಳು ಸಂಭವಿಸಿವೆ. ಅದೇ ಅವಧಿಯಲ್ಲಿ, ವಿದ್ಯುತ್ ಅಪಘಾತಗಳಿಂದಾಗಿ 61 ಪ್ರಾಣಿಗಳು ಮೃತಪಟ್ಟಿವೆ ಎಂದು ಬೆಸ್ಕಾಂ ಅಂಕಿಅಂಶ ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

WhatsApp Group Join Now
Telegram Group Join Now
Share This Article