ವಿಜಯಪುರ, ಏಪ್ರಿಲ್ 7: ಉತ್ತರ ಕರ್ನಾಟಕ ಭಾಗದಿಂದ ಎಂಬಿ ಪಾಟೀಲ್ ಮುಖ್ಯಮಂತ್ರಿ ಆಗಲಿ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಕಡನಿ ಗ್ರಾಮದಲ್ಲಿ ಭಾನುವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮೀಜಿ, ಮೊನ್ನೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿದ್ದೆ. ಈ ವೇಳೆ ಉತ್ತರ ಕರ್ನಾಟಕದಿಂದ ಯಾರಾದರು ಸಿಎಂ ಆಗಬಹುದು ಎಂದರೆ, ಎಂಬಿ ಪಾಟೀಲ್ ಆಗಲಿ ಎಂದಿದ್ದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ, ಎಂಬಿ ಪಾಟೀಲ್ ಅವರನ್ನು ಹಾಡಿಹೊಗಳಿದರು. ಪ್ರಾಕೃತಿಕ ವಿಕೋಪಗಳ ಬಗ್ಗೆಯೂ ಸ್ವಾಮೀಜಿ ಮುನ್ಸೂಚನೆ ನೀಡಿದ್ದಾರೆ.