ಪಾಟ್ನಾ, ಏಪ್ರಿಲ್ 07: ಬಿಹಾರದ ಬಿಜೆಪಿ ನಾಯಕರೊಬ್ಬರ ಪುತ್ರಿ ಮೇಲೆ ದುಷ್ಕರ್ಮಿ ಆ್ಯಸಿಡ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಬೇಗುಸರಾಯ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 24 ವರ್ಷದ ಯುವತಿ ತನ್ನ ಮನೆಯಲ್ಲಿ ಮಲಗಿರುವಾಗ ಆಕೆಯ ಮೇಲೆ ಆ್ಯಸಿಡ್ ಎರೆಚಲಾಗಿದೆ. ದಾಳಿಯಲ್ಲಿ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಆಕೆಯ ಕಿರುಚಾಟ ಕೇಳಿ ಮನೆಯವರು ರೂಮಿಗೆ ಓಡಿ ಬಂದಿದ್ದರು, ಮೊದಲಿಗೆ ಅದು ಹಲ್ಲಿ ಅಥವಾ ಇಲಿ ಇರಬಹುದು ಅದನ್ನು ನೋಡಿ ಆಕೆ ಕಿರುಚಿಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು, ಆದರೆ ನಂತರ ಆ್ಯಸಿಡ್ ದಾಳಿ ನಡೆದಿದೆ ಎಂಬುದು ಅರಿವಾಯಿತು, ಆಕೆಯನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೋಷಕರು ಹೇಳಿದ್ದಾರೆ.