ಬೆಂಗಳೂರು: ಕಳೆದ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ಕರ್ನಾಟಕದಲ್ಲಿ ವರದಿಯಾದ 464 ತಾಯಂದಿರ ಸಾವುಗಳಲ್ಲಿ 70% ಕ್ಕಿಂತ ಹೆಚ್ಚು ತಾಯಂದಿರ ಸಾವನ್ನು ತಡೆಯಬಹುದಿತ್ತು ಎಂದು ರಾಜ್ಯ ಸರ್ಕಾರದ ತಾಯಂದಿರ ಮರಣ ಲೆಕ್ಕಪರಿಶೋಧನಾ ವರದಿಯ ತಿಳಿಸಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಲೋಪಗಳನ್ನು ವರದಿಯು ಎತ್ತಿ ತೋರಿಸಿದೆ. ಕನಿಷ್ಠ 10 ಸಾವುಗಳು ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಸಿವೆ, ಆದರೆ 18 ಸಾವುಗಳು ರಿಂಗರ್ನ ಲ್ಯಾಕ್ಟೇಟ್ ದ್ರವದ ಬಳಕೆಗೆ ಸಂಬಂಧಿಸಿವೆ ಎಂದು ವರದಿಯನ್ನು ಬಿಡುಗಡೆ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ತಿಳಿಸಿದ್ದಾರೆ. 70% ತಾಯಂದಿರ ಸಾವುಗಳನ್ನು ಸಕಾಲಿಕ ಆರೈಕೆ ಮತ್ತು ವೈದ್ಯಕೀಯ ಪ್ರೋಟೋಕಾಲ್ಗಳ ಅನುಸರಣೆಯಿಂದ ತಡೆಯಬಹುದಿತ್ತು ಎಂದು ಹೇಳಿದರು.
ಶೇ 68.05 ರಷ್ಟು ಸಾವಿಗೆ ಅಧಿಕ ರಕ್ತದೊತ್ತಡ, ಹೃದ್ರೋಗ, ಡಯಾಬಿಟಿಸ್, ಸೋಂಕು ಮುಂತಾದವುಗಳು ಕಾರಣವಾಗಿದೆ. ಹೆರಿಗೆಯನ್ನು ಹೆಚ್ಚಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಉಲ್ಲೇಖಿತ ಪ್ರೋಟೋಕಾಲ್ಗಳಿಗೆ ವಿರುದ್ಧವಾಗಿ ಮಾಡಲಾಗುತ್ತಿತ್ತು.
ಡಿಸೆಂಬರ್ನಿಂದ ಇದನ್ನು ಸರಿಪಡಿಸಲು ತಯಾರಿ ಮಾಡಿದ್ದೇವೆ. ಫ್ರೆಷ್ ಫ್ರೋಜನ್ ಪ್ಲಾಸ್ಮಾ ಇದ್ದಿದ್ದರೆ ಸಾವಿನ ಸಂಖ್ಯೆ ತಡೆಯಬಹುದಿತ್ತು. ಹೀಗಾಗಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.