ದರ ಏರಿಕೆ ವಿರುದ್ಧ ಬಿಜೆಪಿ ಹೋರಾಟಕ್ಕೆ ಜೆಡಿಎಸ್‌ ಮುನಿಸು; ಏಕಾಂಗಿ ಹೋರಾಟಕ್ಕೆ ದಳ ತಳಮಳ

Ravi Talawar
ದರ ಏರಿಕೆ ವಿರುದ್ಧ ಬಿಜೆಪಿ ಹೋರಾಟಕ್ಕೆ ಜೆಡಿಎಸ್‌ ಮುನಿಸು; ಏಕಾಂಗಿ ಹೋರಾಟಕ್ಕೆ ದಳ ತಳಮಳ
WhatsApp Group Join Now
Telegram Group Join Now

ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಗೆ ರಾಜ್ಯ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಅಸಮಾಧಾನ ಶುರುವಾಗಿದೆ.

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ, ಈ ಪ್ರತಿಭಟನೆಗೆ ನಮ್ಮನ್ನು ಆಹ್ವಾನಿಸಿಯೇ ಇಲ್ಲ ಎಂದು ಜೆಡಿಎಸ್ ದೂರಿದೆ.

ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಅವರು ಪ್ರತಿಕ್ರಿಯಿಸಿ ಬಿಜೆಪಿ ಅಹೋರಾತ್ರಿ ಧರಣಿ ಮಾಡುತ್ತಿದೆ. ಆದರೆ ನಮಗೆ ಆಹ್ವಾನ ನೀಡಿಲ್ಲ. ಜೆಡಿಎಸ್‌ಗೆ ಮೇಲುಗೈ ಆಗುತ್ತದೆ ಎಂದು ಬಿಜೆಪಿ ನಮ್ಮನ್ನ ಕರೆದಿಲ್ಲ. ಮುಡಾ ಪಾದಯಾತ್ರೆಯಲ್ಲಿ ಹೀಗೆಯೇ ಆಯಿತು. ಈಗಲೂ ಹೀಗೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರಿಗೆ ಮನವಿ ಮಾಡುತ್ತಿದ್ದೇನೆ. ನಾವು ಒಟ್ಟಾಗಿ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಮನ್ವಯ ಸಾಧಿಸಲು ಒಂದು ಸಮಿತಿ ರಚಿಸಿಬೇಕು. ನಾವು ಒಟ್ಟಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಡಿದರೆ, ಬಲ ಹೆಚ್ಚಾಗುತ್ತದೆ. ಹೆಚ್ಚಿನ ಜನರನ್ನು ತಲುಪಬಹುದು ಎಂದು ಹೇಳಿದರು.

ಇಲ್ಲಿ ಸಮನ್ವಯದ ಕೊರತೆಯಿದ್ದು, ಅದು ಕೇಂದ್ರ ನಾಯಕರಿಗೆ ತಿಳಿದಿಲ್ಲ. ಬಿಜೆಪಿ ಧರಣಿ ಘೋಷಿಸಿದ ನಂತರ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರೂ ಕೂಡ ಬೆಲೆ ಏರಿಕೆಯ ವಿರುದ್ಧ ಹೋರಾಡುವುದಾಗಿ ಹೇಳಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಹೋರಾಟ ಪ್ರತ್ಯೇಕವಾಗಿ ನಡೆಯಲಿದೆ ಎಂದು ಹೇಳಿದರು. ಇದು ಒಳ್ಳೆಯದಲ್ಲ. ಎರಡೂ ಪಕ್ಷಗಳ ನಾಯಕರು ತಮ್ಮ ನಡುವಿನ ಸಮನ್ವಯದ ಬಗ್ಗೆ ಚರ್ಚಿಸಬೇಕು” ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article