ಬಳ್ಳಾರಿ, ಮಾ.31: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ನಿಮ್ಮ ಹೆಸರು ಕೇಳಿ ಬರುತ್ತದೆ ಎಂಬ ಪ್ರಶ್ನೆಗೆ ಸಂಸದ ಈ ತುಕಾರಾಂ ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ ಪಕ್ಷದ ವೇದಿಕೆಯಲ್ಲಿ ಅಧ್ಯಕ್ಷರ ಅಯ್ಕೆ ಕುರಿತು ಚರ್ಚೆ ಆಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರಿದ್ದಾರೆ ಈಕುರಿತು ಬಹಿರಂಗವಾಗಿ ಚರ್ಚೆ ಮಾಡಲ್ಲ ಎಂದಿದ್ದಾರೆ.
2008ರಲ್ಲಿ ಮೊದಲ ಬಾರಿ ಶಾಸಕನಾಗಿದಗಿಂದಲೂ, ಈವರೆಗೆ ಪಕ್ಷದ ತೀರ್ಮಾನದಂತೆ ಕೆಲಸ ಮಾಡ್ತಿರುವೆ ಶಾಸಕ ಸ್ಥಾನ ಬಿಟ್ಟು ಸಂಸದ ಸ್ಥಾನಕ್ಕೆ ಸ್ಪರ್ಧಿಸುಲು ಸೂಚಿಸಿದರು. ಲೋಕಸಭೆ ಸ್ಪರ್ಧೆ ಮಾಡಿ ಸಂಸದನಾಗಿರುವೆ. ನನ್ನ ವಿಚಾರದಲ್ಲಿ ಮುಂದೆಯೂ ಎಲ್ಲವೂ ಹೈಕಮಾಂಡ್ ತಿರ್ಮಾನ ಮಾಡುತ್ತದೆಂದರು.