ಧಾರವಾಡ: ಮುಸ್ಲಿಂ ಸಮುದಾಯದ ಜನರು ಧಾರವಾಡ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ಹಬ್ಬ ಯಾವುದೇ ಇರಲ್ಲಿ ವಿದ್ಯಾಕಾಶಿ ಧಾರವಾಡದಲ್ಲಿ ಸಂಭ್ರಮದಿಂದ ಆಚರಣೆ ಮಾಡುವುದು ಎಲ್ಲರಿಗೂ ವಿಶೇಷ. ಶ್ರದ್ಧಾ ಭಕ್ತಿಯ ಸಂಕೇತವಾಗಿರುವ ಪವಿತ್ರ ರಂಜಾನ್ ಹಬ್ಬದ ಶುಭಾಷಯ ಪರಸ್ಪರ ವಿನಿಮಯ ಮಾಡಿ ಕೊಂಡರು ಮುಸ್ಲಿಂ ಬಾಂಧವರು ಹಬ್ಬದ ಸಡಗರವನ್ನು ಇಮ್ಮಡಿಗೊಳ್ಳಿಸಿದರು.