ಶಿಕ್ಷಣಾರ್ಥಿಗಳು ವೃತ್ತಿ ಪ್ರೀತಿಸಿ: ಸಿಎ ಸಿರಿಗೇರಿ ಪನ್ನರಾಜ್ ಕಿವಿಮಾತು

Ravi Talawar
ಶಿಕ್ಷಣಾರ್ಥಿಗಳು ವೃತ್ತಿ ಪ್ರೀತಿಸಿ: ಸಿಎ ಸಿರಿಗೇರಿ ಪನ್ನರಾಜ್ ಕಿವಿಮಾತು
WhatsApp Group Join Now
Telegram Group Join Now
ಬಳ್ಳಾರಿ,ಮಾ.29.: ಶಿಕ್ಷಣ ವೃತ್ತಿ ಪವಿತ್ರವಾದದ್ದು, ಈ ವೃತ್ತಿಯನ್ನು ಪ್ರೀತಿಸುವವರು ಮಾತ್ರ ಶಿಕ್ಷಕರಾಗಬೇಕು ಎಂದು ಸಿಎ ಸಿರಿಗೇರಿ ಪನ್ನರಾಜ್ ಹೇಳಿದರು.
ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ (ಬಿ.ಇಡಿ) ಶ್ರೀ ಮಹಾದೇವ ತಾತ ಕಲಾ ಸಂಘವು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ  ಶಿಕ್ಷಣದಲ್ಲಿ ಸಾಹಿತ್ಯ ಮತ್ತು ರಂಗಭೂಮಿಯ ಮಹತ್ವದ ವಿಚಾರ ಸಂಕಿರಣ ಹಾಗೂ ರಂಗ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿ ಜೀವನದಲ್ಲಿ ಶಿಕ್ಷಕರು ಸುಶೀಲನಾಗಿರಬೇಕು. ಒಂದು ಕಚೇರಿ ನೌಕರ ಎಡವಿದರೆ ಕೆಲಸಗಳು ಹಾಳಾಗಬಹುದು. ಆದರೆ, ಒಬ್ಬ ಶಿಕ್ಷಕ ಎಡವಿದರೆ ಒಂದೇ ತಲೆಮಾರಿನ ಜೀವನ ಹಾಳಾಗಬಹುದು ಎಂದು ಕಿವಿ ಮಾತು ಹೇಳಿದರು.
ಸಾಹಿತಿ ಕಾಳಪ್ಪ ಪತ್ತಾರ್ ಮಾತನಾಡಿ, ಸಾಹಿತ್ಯವಿಲ್ಲದ ಶಿಕ್ಷಣ ಪರಿಪೂರ್ಣವಾಗಲಾರದು. ಸಾಹಿತ್ಯವು ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಹಾಗೂ ಸಂಸ್ಕಾರವನ್ನು ಕಲಿಸುವ ಆಯಸ್ಕಾಂತಿಯ ಶಕ್ತಿಯಾಗಿದೆ. ಪಠ್ಯದಲ್ಲಿ ಬರುವ ಪದ್ಯ, ವಚನ, ಗದ್ಯ, ಜಾನಪದ, ನಾಟಕ ಕಥೆ ಹಾಗೂ ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ದೃಶ್ಯ ಕಾವ್ಯಯಾಗಿ ಹೇಳುವ ರಂಗ ಕಲೆಯನ್ನು ಶಿಕ್ಷಕರು ಕರಗತ ಮಾಡಿಕೊಂಡು ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಂಶುಪಾಲ ಡಾ.ಆಶ್ವರಾಮು ಮಾತನಾಡಿ, ನಮ್ಮ ಕಾಲೇಜಿನ ಶಿಕ್ಷಣಾರ್ಥಿಗಳಿಗೆ ಪೂರಕವಾದ ವಿಚಾರ ಸಂಕಿರಣಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಾಸ್ತವಿಕವಾಗಿ  ಶ್ರೀ ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಮಾತನಾಡಿದರು.
ಬಳಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಅಶ್ವ ರಾಮಣ್ಣ, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕ್ರತೆ ರಂಗ ನಟಿ ರೇಣುಕಾ ಭಾವಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ದೊಡ್ಡ ಬಸವಗವಾಯಿಗಳ ತಂಡದಿAದ ಗೀತ ಗಾಯನ, ಭಾವಿಹಳ್ಳಿ ರೇಣುಕಾ ಹಾಗೂ ಸಾಯಿಶೃತಿ ಹಂದ್ಯಾಳು ರಂಗಗೀತೆ ಗಾಯನ ಹಾಗೂ ರಾಜಶೇಖರ್ ತಂಡದಿAದ ವೀರಗಾಸೆ ಕುಣಿತ ಪ್ರದರ್ಶನ ನೀಡಲಾಯಿತು. ಸ್ವಾಗತ ಪ್ರೊ. ಅಲಂಬಾಷ್, ನಿರೂಪಣೆ ಮಂಗಳಗೌರಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ  ಟ್ರಾಫಿಕ್ ಸಿಪಿಐ ಆಯ್ಯನಗೌಡ ಪಾಟೀಲ್, ಭೀಮನೇನಿ ಪ್ರಸಾದ್, ಭೀಮನೇನಿ ಭಾಸ್ಕರ್, ಲಕ್ಷ್ಮಿ ಪವನಕುಮಾರ, ಹಂದ್ಯಾಳು ಗ್ರಾಪಂ ಸದಸ್ಯ ಜಿ.ಲಿಂಗಪ್ಪ , ಶಿಕ್ಷಣಾರ್ಥಿಗಳು, ಬೋಧಕ ಹಾಗೂ ಬೋಧಕತೇರ ಸಿಬ್ಬಂದಿ ಇದ್ದರು.
WhatsApp Group Join Now
Telegram Group Join Now
Share This Article