ಬಳ್ಳಾರಿ: 28.ನಗರದ ಪತ್ರಿಕಾ ಭವನದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ರಂಗ ಭೂಮಿ ಕಲಾವಿದ, ಪೋಟೋ ಜರ್ನಲಿಸ್ಟ್ ಪುರುಷೋತ್ತಮ ಹಂದ್ಯಾಳು ಅವರನ್ನು ಗುರುವಾರ ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಸುಮಾರು ವರ್ಷಗಳಿಂದ ಪುರುಷೋತ್ತಮ ಹಂದ್ಯಾಳ ಅವರು, ಪೋಟೋ ಜರ್ನಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಜೊತೆಗೆ ಅತ್ಯುತ್ತಮ ಕಲಾವಿದರಾಗಿ ಹೋರ ಹೊಮ್ಮಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸಿ ಅತ್ಯುತ್ತಮ ಕಲಾವಿದರಾಗಿ ಲಕ್ಷಾಂತರ ಪ್ರೆಕ್ಷಕರ ಗಮನಸೆಳೆದಿದ್ದಾರೆ. ರಂಗಭೂಮಿಯಲ್ಲಿ ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಒಲಿದು ಬಂದಿವೆ. ಜಿಲ್ಲೆ ಅಷ್ಟೇ ಅಲ್ಲ, ರಾಜ್ಯದ ನಾನಾ ಜಿಲ್ಲೆಗಳಲ್ಲೂ ಶಕುನಿ ಪಾತ್ರ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಪುರುಷೋತ್ತಮ ಹಂದ್ಯಾಳ ಅವರ, ಈ ಅಪಾರ ಸಾಧನೆಯನ್ನು ಮೆಚ್ಚಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ನಗರದ ಪತ್ರಕರ್ತರು ಅವರನ್ನು ಸನ್ಮಾನಿಸಿ ಗೌರವಿಸಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ತುಂಗಭದ್ರಾ ರೈತ ಸಂಘದ ಸoಸ್ಥಾಪಕ ಅಧ್ಯಕ್ಷ ಡಾ.ಪುರುಷೋತ್ತಮ ಗೌಡ ಅವರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ
ವಾರ್ತಾ ಇಲಾಖೆಯ ಅಧಿಕಾರಿ ಗುರುರಾಜ್, ನಿವೃತ್ತ ವಾರ್ತಾಧಿಕಾರಿ ಚೋರನೂರು ಕೊಟ್ರಪ್ಪ, ಹಿರಿಯ ಪತ್ರಕರ್ತ ಎಂ.ಅಹಿರಾಜ್,
ಪತ್ರಕರ್ತರಾದ ಕೆ.ಎಂ. ಮಂಜುನಾಥ್, ನಾಗರಾಜ್, ಪ್ರವೀಣ್ ರಾಜ್, ವೀರಭದ್ರಗೌಡ, ಮಹೇಂದ್ರಕುಮಾರ್, ವೆಂಕೋಬಿ ಸಂಗನಕಲ್ಲು, ಲಕ್ಷ್ಮೀ ಪವನ್ ಕುಮಾರ್, ವೀರೇಶ್ ಕರೂರು ಇತರರಿದ್ದರು.