ಬೈಲಹೊಂಗಲ. ಮುಸ್ಲಿಂರಿಗಾಗಿ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಬೈಲಹೊಂಗಲದಲ್ಲಿ ಬಿಜೆಪಿ ಮುಖಂಡರಾದ ವಿಜಯ್ ಮೆಟಗುಡ್ಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದೇ ವೇಳೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ದಲ್ಲಿ ಭಾ.ಜ.ಪಾ ಕಾರ್ಯಕರ್ತರು ಡಿ.ಕೆ ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಮಂಡಲ ಅಧ್ಯಕ್ಷರಾದ ಸುಭಾಷ್ ತುರಮರಿ,ಹಿರಿಯ ಮುಖಂಡರಾದ ಗುರುಪಾದ ಕಳ್ಳಿ, ಸುನಿಲ್ ಮರಕುಂಬಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಬೂದಿಹಾಳ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಅಮ್ಮಿನಭಾವಿ, ಅಜ್ಜಪ್ಪ ಹೊಸುರ, ಗೌಡಪ್ಪ ಹೊಸಮನಿ, ನಾಗಪ್ಪ ಸಂಗೊಳ್ಳಿ, ಉಮೇಶ್ ಬೋಳಣ್ಣವರ, ಸದಾಶಿವಗೌಡ ಪಾಟೀಲ,ಆತ್ಮಾನಂದ ಅಬ್ಬಾಯಿ,ಪುಂಡಲೀಕ ಭಜಂತ್ರಿ, ಶ್ರೀಶೈಲ ಕಟ್ಟಿಮನಿ,ರವಿ ತುರಮರಿ,ಕಿರಣ್ ಶೀಲವಂತರ, ಪ್ರವೀಣ್ಶಿಂಗಾರಿ,ಸಿ.ಜಿ.ವಿಭೂತಿಮಠ,ರಾಜು ಗುಡಿಮನಿ, ಪರಶುರಾಮ ರಾಯಭಾಗ, ಮಡಿವಾಳ ಬಡ್ಲಿ,ವಿರೇಶ ಬೂಶಣ್ಣವರ,ಸಂಗಪ್ಪ ಮುನವಳ್ಳಿ ಹಾಗೂ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು