ಬೆಂಗಳೂರು: ಮಹಾರಾಷ್ಟ್ರೀಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಅದರಂತೆ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಬಂದ್ ನಡೆಯಲಿದೆ. ಬಂದ್ ಸಮಯದಲ್ಲಿ ಏನಿರುತ್ತಾ ಹಾಗೂ ಏನಿರಲ್ಲ ಎಂಬ ಮಾಹಿತಿ ಇಲ್ಲಿದೆ.
ಏನಿರುತ್ತೆ?
* ದೈನಂದಿನ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ, ಮೆಡಿಕಲ್, ವೈದ್ಯಕೀಯ ಸೇವೆ ನಾಳೆಯೂ ಇರಲಿದೆ
* ಆ್ಯಂಬುಲೆನ್ಸ್ , ಹೋಲ್ ಸೆಲ್ ಬಟ್ಟೆ ಅಂಗಡಿಗಳು ಇರಲಿವೆ
* ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್, ಹೋಟೆಲ್ ಗಳ ಎಂದಿನಂತೆ ಓಪನ್ ಇರಲಿದೆ
* BMTC-KSRTC,ಮೆಟ್ರೋ ಸಂಚಾರ, ರೈಲು ಓಡಾಡಲಿವೆ
* ಖಾಸಗಿ ಬಸ್, ಶಾಲಾ ವಾಹನ ಓಡಾಟ ಇರಲಿದೆ.
* ಬಾರ್ ಗಳು ತೆರೆದಿರಲಿದ್ದು, ಏರ್ ಪೋರ್ಟ್ ಟ್ಯಾಕ್ಸಿ ಸೇವೆ ಇರಲಿದೆ
* ಶೇಕಡ 65ರಷ್ಟು ಆಟೋಗಳ ಸೇವೆ ಇರಲಿದೆ
ಏನಿರಲ್ಲ?
ಥಿಯೇಟರ್ ಗಳು ಮಧ್ಯಾಹ್ನ ತನಕ ಬಂದ್
ಶೇಕಡ 35ರಷ್ಟು ಆಟೋ ಸೇವೆಯಲ್ಲಿ ತುಸು ವ್ಯತ್ಯಯ
ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ
ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ
ನೈತಿಕ ಬೆಂಬಲ
* BMTC-KSRTC ನೌಕರರ ಸಂಘ, ಲಾರಿ ಚಾಲಕರ ಸಂಘ, ಮದ್ಯ ಮಾರಾಟಗಾರರ ಸಂಘ, ಕೆಲ ಮಾಲ್ ಅಸೋಸಿಯೇಷನ್, ಗಾರ್ಮೆಂಟ್ಸ್ ಅಸೋಸಿಯೇಷನ್, ಹೋಲ್ ಸೆಲ್ ಬಟ್ಟೆ ವ್ಯಾಪಾರಸ್ಥರು, ಹೋಟೆಲ್ ಅಸೋಸಿಯೇಷನ್, ಬೆಂಗಳೂರು ಸಂಚಾರಿ ಆಟೋ ಸೇನೆ, APMC ಮಾರುಕಟ್ಟೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ, ಬೀದಿ ಬದಿ ವ್ಯಾಪಾರಿಗಳ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘಟನೆ, ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್, ಖಾಸಗಿ ಶಾಲೆಗಳ ಒಕ್ಕೂಟ ಕೃಪಾ, ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ ಪೋಷಕರ ಸಮನ್ವಯ ಸಮಿತಿ, ಪೀಸ್ ಆಟೋ ಸಂಘಟನೆ ಮತ್ತು ಕರುನಾಡು ಕಾರ್ಮಿಕ ಸೇನೆ ಬೆಂಬಲ ನೀಡಿವೆ.
ಬಂದ್ ಗೆ ಸಂಪೂರ್ಣ ಬೆಂಬಲ
* ಓಲಾ- ಉಬರ್ ಚಾಲಕರ ಸಂಘ, ಶಿವರಾಮೇಗೌಡ ಬಣ, ಕರವೇ ಗಜಕೇಸರಿ ಸೇನೆ, ಡಾ.ರಾಜ್ ಕುಮಾರ್ ಅಭಿಮಾನಿ ಸಂಘ, ವೀರ ಕನ್ನಡಿಗರ ಸೇನೆ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು, ರೂಪೇಶ್ ರಾಜಣ್ಣ ಬಣ, ಬೆಂಗಳೂರು ಆಟೋ ಸೇನೆ, ಜಯಭಾರತ್ ಚಾಲಕರ ಸಂಘ, ಕರ್ನಾಟಕ ಜನಪರ ವೇದಿಕೆ, ಆದರ್ಶ ಆಟೋ ಯೂನಿಯನ್, ಗೂಡ್ಸ್ ಚಾಲಕರ ಸಂಘ
ಯಾರೂ ಬೆಂಬಲ ನೀಡಿಲ್ಲ
* ಪ್ರವೀಣ್ ಶೆಟ್ಟಿ ಬಣ, ಕರವೇ ನಾರಾಯಣಗೌಡರ ಬಣ