ಶಿವಪುರಿ: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಟಟಿಲಾ ಅಣೆಕಟ್ಟಿನಲ್ಲಿ ದೋಣಿ ಮಗುಚಿ ನಾಪತ್ತೆಯಾಗಿದ್ದ 7 ಜನರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಂಗಳವಾರ ಸಂಜೆ ಮಟಟಿಲಾ ಅಣೆಕಟ್ಟಿನ ಮಧ್ಯದಲ್ಲಿರುವ ಸಟೋರಿಯಾ ದ್ವೀಪದಲ್ಲಿರುವ ಸಿದ್ಧ ಬಾಬಾ ದೇವಸ್ಥಾನಕ್ಕೆ ಹೋಳಿ ಹಬ್ಬ ಆಡಲು ಹೋಗುತ್ತಿದ್ದ ಭಕ್ತರಿಂದ ತುಂಬಿದ್ದ ದೋಣಿ ಮಗುಚಿ ಬಿದ್ದಿತ್ತು. ಶಿವಪುರಿ ಜಿಲ್ಲೆಯ ಪಿಚೋರ್ ವಿಧಾನಸಭಾ ಕ್ಷೇತ್ರದ ಖಾನಿಯಾಧಾನ ಪೊಲೀಸ್ ಠಾಣೆ ವ್ಯಾಪ್ತಿಯ ರಾಜವನ್ ಗ್ರಾಮದಲ್ಲಿ ಮಂಗಳವಾರ ಈ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಏಳು ಜನರು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು. ಎಂಟು ಜನರನ್ನು ರಕ್ಷಿಸಲಾಗಿತ್ತು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ತಕ್ಷಣ ಸ್ಥಳಕ್ಕೆ ತಲುಪಿದ್ದು, ಮಂಗಳವಾರ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿತ್ತು. ಕತ್ತಲೆಯಾಗಿದ್ದ ಕಾರಣ ರಕ್ಷಣಾ ತಂಡಕ್ಕೆ ಯಾವುದೇ ಯಶಸ್ಸು ಸಿಕ್ಕಿರಲಿಲ್ಲ.