ಬೆಳಗಾವಿ ಪಾಲಿಕೆ ಬಿಜೆಪಿ ಮಡಿಲಿಗೆ

Ravi Talawar
ಬೆಳಗಾವಿ ಪಾಲಿಕೆ ಬಿಜೆಪಿ ಮಡಿಲಿಗೆ
WhatsApp Group Join Now
Telegram Group Join Now

ಬೆಳಗಾವಿ, ಮಾರ್ಚ್​​ 15: ಮಹಾನಗರ ಪಾಲಿಕೆಯ (Municipality) ಮೂರನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್​​ಗೆ ಚುನಾವಣೆ (Election) ನಡೆದಿತ್ತು. ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಂತ್ರ ಪ್ರತಿತಂತ್ರ ರೂಪಿಸಿದ್ದವು. ಹೀಗಾಗಿ ತೀವ್ರ ಕುತೂಹಲ ಮೂಡಿಸಿತ್ತು. ಸದ್ಯ ಈ ಕುತೂಹಲಕ್ಕೆ ಬ್ರೇಕ್​ ಬಿದ್ದಿದ್ದು, ಬೆಳಗಾವಿ ಪಾಲಿಕೆ ಬಿಜೆಪಿ ಮಡಿಲಿಗೆ ಸೇರಿದೆ. ಆ ಮೂಲಕ ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ ಆಗಿದ್ದು, ಉಪಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆ ಆಗಿದ್ದಾರೆ.

ಮೇಯರ್ ಸ್ಥಾನಕ್ಕೆ ಬಿಜೆಪಿಯ ಮಂಗೇಶ ಪವಾರ್, ಎಂಇಎಸ್​​ನ ಬಸವರಾಜ ಮಾರುತಿ ಮೋದಗೇಕರ,  ಎಐಎಂಐಎಂನ ಶಾಹಿದಖಾನ್ ಪಠಾಣ ಮತ್ತು ರಾಜು ಭಾತಖಾಂಡೆ ತಲಾ 2 ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿಯಾಗಿ ಉಪಮೇಯರ್ ಸ್ಥಾನಕ್ಕೆ ದೀಪಾಲಿ ಟೊಪ್ಪಗಿ, ವಾಣಿ ವಿಲಾಸ ಜೋಶಿ, ಲಕ್ಷ್ಮೀ ಲೋಕರಿ ಮತ್ತು ಶ್ರೀಮತಿ ಖುರ್ಷಿದ್ ಮುಲ್ಲಾ ತಲಾ 2 ನಾಮಪತ್ರ ಸಲ್ಲಿದರು. ಬಳಿಕ ಖುರ್ಷಿದ್ ಮುಲ್ಲಾ ಹಾಗೂ ದೀಪಾಲಿ ಉಮೇದುವಾರಿಕೆ ವಾಪಸ್ ಪಡೆದುಕೊಂಡರು.
WhatsApp Group Join Now
Telegram Group Join Now
Share This Article