ನೇಸರಗಿ: ಇಲ್ಲಿನ ಶ್ರೀ ಮಾರುತಿ ದೇವಸ್ಥಾನ ಹಾಗೂ ಕಾಜಗಾರ ಗಲ್ಲಿಯ ಪುಟ್ಟ ಪುಟ್ಟ ಮಕ್ಕಳು ಬೆಳಿಗ್ಗೆಯಿಂದಲೆ ವನ್ ಬಣ್ಣ ಹಾಗೂ ನೀರು ಬನ್ನವನ್ನು ಪರಸ್ಪರ ಎರಚುತ್ತ, ದಾರಿಯಲ್ಲಿ ಹೋಗುವ ಜನರಗೆ, ಗಲ್ಲಿಯ ಮಹಿಳೆಯರಿಗೆ ರಂಗು ರಂಗಿನ ಬಣ್ಣಗಳನ್ನು ಎರಚುವ ಮುಖಾಂತರ ಪವಿತ್ರ ಹೊಳಿ ಹಬ್ಬವನ್ನು ಆಚರಿಸಲಾಯಿತು.
ಗುರುವಾರ ಸಂಜೆ ಕಾಮಣ್ಣನನ್ನು ಮೆರವನಿಗೆ ಮಾಡಿ ಕರ್ನಾಟಕ ಚೌಕ ಹತ್ತಿರ ಇಡಲಾಗುತ್ತಿದ್ದು ಸಂಜೆ ಎಲ್ಲರೂ ಪೂಜೆ, ಎಡೆ, ಪ್ರಸಾದ ನೀಡುವದರ ಮೂಲಕ ಮರುದಿನ ಶುಕ್ರವಾರ ಬೆಳಿಗ್ಗೆಯಿಂದ ಮದ್ಯಾಹ್ನ 12 ರ ವರೆಗೆ ಬಣ್ಣ ಆಡಿ ಕಾಮದಹನ ಮಾಡಿ, ಆ ಧಹನವಾದ ಬೆಂಕಿಯನ್ನು ಮನೆಗೆ ತಂದು ಕಡಲೆ, ಶೇಂಗಾ ಬೇಯಿಸಿ ತಿಂದು ಸ್ನಾನ ಮಾಡಿ, ಹೊಳಿಗೆ ಪ್ರಸಾದ ಮಾಡಿ ಎಲ್ಲ ದೇವರಿಗೆ ಪ್ರಸಾದ ಮಾಡಿ ಸಿಹಿ ಊಟವನ್ನು ಸವಿದು ಗ್ರಾಮಸ್ಥರು ಹೊಳಿ ಆಚರಿಸಿದರು.