ವಿಶ್ವಸಂಸ್ಥೆ: ಮುಸ್ಲಿಮರ ವಿರುದ್ಧದ ಧಾರ್ಮಿಕ ಅಸಹಿಷ್ಣುತೆಯ ಘಟನೆಗಳನ್ನು ಖಂಡಿಸುವಲ್ಲಿ ಭಾರತ ವಿಶ್ವಸಂಸ್ಥೆಯ ಸದಸ್ಯರೊಂದಿಗೆ ಒಗ್ಗಟ್ಟಾಗಿದೆ ಎಂದು ಹೇಳಿದೆ.
ಧಾರ್ಮಿಕ ತಾರತಮ್ಯವು ಎಲ್ಲಾ ಧರ್ಮಗಳ ಅನುಯಾಯಿಗಳ ಮೇಲೆ ಪರಿಣಾಮ ಬೀರುವ ವಿಶಾಲ ಸವಾಲಾಗಿದೆ ಎಂದು ಗುರುತಿಸುವ ಅಗತ್ಯವನ್ನು ಭಾರತ ಒತ್ತಿ ಹೇಳಿದೆ.
“ಭಾರತ ವೈವಿಧ್ಯತೆ ಮತ್ತು ಬಹುತ್ವದ ಭೂಮಿ. ನಾವು ಪ್ರಪಂಚದ ಬಹುತೇಕ ಎಲ್ಲಾ ಪ್ರಮುಖ ಧರ್ಮಗಳ ಅನುಯಾಯಿಗಳಿಗೆ ನೆಲೆಯಾಗಿದ್ದೇವೆ ಮತ್ತು ಭಾರತ ನಾಲ್ಕು ವಿಶ್ವ ಧರ್ಮಗಳಾದ ಹಿಂದೂ ಧರ್ಮ, ಬೌದ್ಧಧರ್ಮ, ಜೈನ ಮತ್ತು ಸಿಖ್ ಧರ್ಮಗಳ ಜನ್ಮಸ್ಥಳವಾಗಿದೆ. 200 ಮಿಲಿಯನ್‌ಗಿಂತಲೂ ಹೆಚ್ಚು ನಾಗರಿಕರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವವರು ಇರುವ ಭಾರತ ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಗೆ ನೆಲೆಯಾಗಿದೆ” ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪಿ. ಹರೀಶ್ ಶುಕ್ರವಾರ ಹೇಳಿದರು.