51 ವರ್ಷದವರೆಗೆ ಮಹಿಳೆ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅರ್ಹಳು: ಕೇರಳ ಹೈಕೋರ್ಟ್

Ravi Talawar
51 ವರ್ಷದವರೆಗೆ ಮಹಿಳೆ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅರ್ಹಳು: ಕೇರಳ ಹೈಕೋರ್ಟ್
WhatsApp Group Join Now
Telegram Group Join Now

ಕೊಚ್ಚಿ: 50 ವರ್ಷ ಪೂರ್ಣಗೊಂಡು 51 ವರ್ಷ ತುಂಬುವವರೆಗೆ ಮಹಿಳೆ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅರ್ಹಳಾಗಿದ್ದು, 51 ವರ್ಷ ಮುಗಿದ ನಂತರ ಆಕೆಯ ಅರ್ಹತೆ ಕೊನೆಯಾಗುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಮಹಿಳೆಗೆ 50 ವರ್ಷವಾಗಿದೆ ಎಂಬ ಕಾರಣಕ್ಕೆ ಬಾಡಿಗೆ ತಾಯ್ತನ ಹೊಂದಲು ಅನರ್ಹಳಾದಳು ಎಂದು ಅನುಮತಿ ನಿರಾಕರಿಸಿದ ಏಕಪೀಠ ನ್ಯಾಯಾಧೀಶರ ತೀರ್ಪಿನ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕರಿಸಿದ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿತು.

50 ನೇ ವರ್ಷದ ಆರಂಭದಿಂದ ಅಥವಾ 50 ವರ್ಷ ಅಂತ್ಯದವರೆಗೆ ಮಹಿಳೆ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅರ್ಹಳಾಗಿದ್ದಾಳೆಯೇ ಎಂಬುದು ಮೇಲ್ಮನವಿಯಲ್ಲಿರುವ ಪ್ರಶ್ನೆಯಾಗಿದೆ ಎಂದು ವಿಭಾಗೀಯ ಪೀಠವು ಗಮನಿಸಿತು.

WhatsApp Group Join Now
Telegram Group Join Now
Share This Article