ಮಾರ್ಚ16 ರಿಂದ ಶ್ರೀ ಚೆನ್ನವೃಷಬೇಂದ್ರ ಅಜ್ಜನವರ ಜಾತ್ರೋತ್ಸವ

Ravi Talawar
ಮಾರ್ಚ16 ರಿಂದ ಶ್ರೀ ಚೆನ್ನವೃಷಬೇಂದ್ರ ಅಜ್ಜನವರ ಜಾತ್ರೋತ್ಸವ
WhatsApp Group Join Now
Telegram Group Join Now
ನೇಸರಗಿ.ಮಾ. 13.ಇಲ್ಲಿಗೆ ಸಮೀಪದ ಮದನಭಾವಿ ಗ್ರಾಮದ ಸುಕ್ಷೇತ್ರ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠ ಇದರ ಜಾತ್ರಾ ಮಹೋತ್ಸವ ಹಾಗೂ ಮಾತೋಶ್ರೀ ನೀಲಗಂಗಮ್ಮ ನವರ 58 ನೇ ಪುಣ್ಯರಾಧನೆಯು  ರವಿವಾರ ದಿನಾಂಕ 16-03-2025 ರಿಂದ 18-03-2025 ರವರೆ ನಡೆಯಲಿದೆ. ದಿ 16 ರಂದು ಹಾರುಗೊಪ್ಪ ಶ್ರೀ   ಶಿವಪ್ಪ ಅಜ್ಜನವರಿಂದ ಕರ್ತುಗದ್ದುಗೆಗೆ ರುದ್ರಾಭಿಷೇಕ, ಕಳಸಾರೋಹಣ, ಸಂಜೆ ಪ್ರವಚನ, ಕೀರ್ತನೆ, ಶ್ರೀಗಳ ಕಿರೀಟ ಪೂಜೆ, ಮಹಾಪ್ರಸಾದ ನಡೆಯುವದು. ದಿ. 17 ರಂದು ರಾತ್ರಿ ಪ್ರವಚನ, ಕೀರ್ತನೆ, ಮಹಾಪ್ರಸಾದ ನೆರವೇರುವವು. ದಿ. 18 ರಂದು ಬೆಳಿಗ್ಗೆ 8 ಕ್ಕೆ ಶಿವಪಂಚಾಕ್ಷರಿ ಜಪಯಜ್ಞ, ಮದ್ಯಾಹ್ನ 11-30 ಕ್ಕೆ ಸಾಮೂಹಿಕ ವಿವಾಹ,ಮಹಾಪ್ರಸಾದ, ಸಂಜೆ 5 ಕ್ಕೆ ಅಜ್ಜನವರ ಮಹಾರಾಥೋತ್ಸವ  ಜರುಗಲಿದೆ. ದಿ. 18 ರಂದು ಸಂಜೆ 6 ಘಂಟೆಗೆ ಮಧನಭಾವಿಯ  ಶ್ರೀ ಮಹಾಂತೇಶ ದೊಡ್ಡಗೌಡರ ಅಭಿಮಾನಿ ಬಳಗದಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯುತ್ತವೆ. ಈ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವಇಕನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು. ಸಾನಿಧ್ಯವನ್ನು ಶ್ರೀ ಮಠದ ಪ ಪೂ. ಮಾತೋಶ್ರೀ ಶಿವದೇವಿ ತಾಯಿ ( ಆನಂದ ಭಾರತಿ ) ವಹಿಸುವರು. ಜಾತ್ರಾ ಮಹೋತ್ಸವದಲ್ಲಿ ಜ್ಞಾನದಾಸೋಹದಲ್ಲಿ  ಬೈಲಹೊಂಗಲದ  ಮಹಾದೇವ ಸರಸ್ವತಿ ಶ್ರೀಗಳು, ಇಂಚಲದ ಪೂರ್ನಾನಂದ ಭಾರತಿ  ಶ್ರೀಗಳು,ತೊಂಡಿಕಟ್ಟಿಯ ಅಭಿನವ ವೆಂಕಟೇಶ ಶ್ರೀಗಳು, ಸವಟಗಿಯ ಲಿಂಗಯ್ಯ ಶ್ರೀಗಳು, ಹಾರುಗೊಪ್ಪದ  ಮಾತೋಶ್ರೀ ಶಿವಯೋಗಿಣಿ ತಾಯಿ, ಧತ್ತವಾಡದ ಹೃಶಿಕಾನಂದ ಶ್ರೀಗಳು, ನೇಸರಗಿ ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಶ್ರೀಗಳು, ಮುರಕಿಭಾವಿಯ ಮಾತೋಶ್ರೀ ಪರಮೇಶ್ವರಿ ಅಮ್ಮನವರು, ಹಡಗಿನಹಾಳದ ಮಲ್ಲೇಶ್ವರ ಶರಣರು   3 ದಿನಗಳ ಪ್ರವಚನ ಕೀರ್ತನೆ, ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಜಾತ್ರಾ ಕಮಿಟಿ ಸದಸ್ಯರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article