ಅಸಾಂವಿಧಾನಿಕ ಪದ ಬಳಕೆಗೆ ಖರ್ಗೆ ಸಭಾಪತಿಗೆ ಕ್ಷಮೆ!

Ravi Talawar
ಅಸಾಂವಿಧಾನಿಕ ಪದ ಬಳಕೆಗೆ ಖರ್ಗೆ ಸಭಾಪತಿಗೆ ಕ್ಷಮೆ!
WhatsApp Group Join Now
Telegram Group Join Now

ನವದೆಹಲಿ, (ಮಾರ್ಚ್ 12): ರಾಜ್ಯಸಭಾ ಕಲಾಪದ ವೇಳೆ ಉಪಸಭಾಪತಿ ಹರಿವಂಶ್ ವಿರುದ್ಧವೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕ್ಷಮೆ ಕೇಳಿದ್ದಾರೆ.

ಆಡಳಿತ ಪಕ್ಷದ ಸದಸ್ಯರ ವಿರೋಧದ ಬಳಿಕ ಅವರು ಕ್ಷಮೆ ಕೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಲು ಬಯಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಉಪಸಭಾಪತಿ ಹರಿವಂಶ್ ಅವಕಾಶ ನೀಡಲಿಲ್ಲ. ಇದಕ್ಕೆ ಆಕ್ರೋಶಗೊಂಡ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಏಕಾಏಕಿ ಎದ್ದು ಸದನದಲ್ಲಿ ಮಾತನಾಡಲು ಪ್ರಾರಂಭಿಸಿದ್ದರು. ಇದಕ್ಕೆ ಉಪಸಭಾಪತಿ ಹರಿವಂಶ್ ವಿರೋಧ ವ್ಯಕ್ತಪಡಿಸಿದ್ದರು. ದೇಶದಲ್ಲಿ ಸರ್ವಾಧಿಕಾರ ನಡೆದಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

WhatsApp Group Join Now
Telegram Group Join Now
Share This Article