ಪಾಕ್‌ ಉಗ್ರರಿಂದ ಬಲೂಚ್‌ ಸೇನೆ ರೈಲು ಹೈಜಾಕ್‌ ; 11 ಸೈನಿಕರು, 182 ಜನರ ಒತ್ತೆಯಾಳು!

Ravi Talawar
ಪಾಕ್‌ ಉಗ್ರರಿಂದ ಬಲೂಚ್‌ ಸೇನೆ ರೈಲು ಹೈಜಾಕ್‌ ; 11 ಸೈನಿಕರು, 182 ಜನರ ಒತ್ತೆಯಾಳು!
WhatsApp Group Join Now
Telegram Group Join Now

ಇಸ್ಲಾಮಾಬಾದ್, (ಮಾರ್ಚ್ 11): ಪಾಕಿಸ್ತಾನದಲ್ಲಿ ಬಲೂಚ್ ಸೇನೆಯು ಇಡೀ ರೈಲನ್ನು ಅಪಹರಿಸಿದೆ. ಈ ರೈಲಿನಲ್ಲಿ ಸುಮಾರು 400 ಜನರಿದ್ದರು. ಅವರನ್ನು ಭಯೋತ್ಪಾದಕರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಪಾಕಿಸ್ತಾನಿ ಸೇನೆಯು ರೈಲನ್ನು ಅಪಹರಣಕಾರರಿಂದ ಮುಕ್ತಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಆದರೆ, ಈ ವೇಳೆ 11 ಸೈನಿಕರು ಸಾವನ್ನಪ್ಪಿದ್ದಾರೆ. ಉಗ್ರರು ರೈಲಿನಲ್ಲಿದ್ದ ಸುಮಾರು 182 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳು ಪ್ಯಾಸೆಂಜರ್​​​​ ರೈಲನ್ನು ಹೈಜಾಕ್ ಮಾಡಿದ್ದಾರೆ. ರೈಲಿನಲ್ಲಿದ್ದ ಪಾಕಿಸ್ತಾನದ 11 ಪಾಕ್ ಸೈನಿಕರನ್ನು ಹತ್ಯೆಗೈದ ಪ್ರತ್ಯೇಕತಾವಾದಿಗಳು 182 ಪ್ರಯಾಣಿಕರನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ. ಗುಂಡು ಹಾರಿಸಿ ಜಾಫರ್​​​​ ರೈಲು ಹೈಜಾಕ್​ ಮಾಡಿದ ಪ್ರತ್ಯೇಕತಾವಾದಿಗಳು ಈ ಕೃತ್ಯ ಎಸಗಿದ್ದಾರೆ.

ಕ್ವೆಟ್ಟಾದಿಂದ ಪೇಶಾವರ್‌ಗೆ ತೆರಳುತ್ತಿದ್ದ ಜಾಫರ್ ರೈಲು ಹೈಜಾಕ್ ಮಾಡಲಾಗಿದ್ದು, ಪಾಕ್​ ಸೇನೆ ದಾಳಿಗೆ ಮುಂದಾದರೆ ಎಲ್ಲ ಪ್ರಯಾಣಿಕರನ್ನು ಕೊಂದು ಹಾಕ್ತೇವೆ ಎಂದು ಉಗ್ರರು ಪಾಕ್​ ಸೇನೆಗೆ ಎಚ್ಚರಿಕೆ ನೀಡಿದ್ದಾರೆ. ಪ್ರತ್ಯೇಕತಾವಾದಿಗಳ ಮೇಲೆ ಪ್ರಯಾಣಿಕರ ರಕ್ಷಣೆಗೆ ಪಾಕಿಸ್ತಾನದ ಸೇನೆಯಿಂದ ವೈಮಾನಿಕ ದಾಳಿ ನಡೆಸಲಾಗಿದೆ.

WhatsApp Group Join Now
Telegram Group Join Now
Share This Article