ಎಲ್ಲ ವರ್ಗಕ್ಕಾಗಿ ಬಜೆಟ್‌ ನೀಡಿದ್ದೇವೆ: ಬಿಜೆಪಿ ಆರೋಪಕ್ಕೆ ಸಿಎಂ ತಿರುಗೇಟು

Ravi Talawar
ಎಲ್ಲ ವರ್ಗಕ್ಕಾಗಿ ಬಜೆಟ್‌ ನೀಡಿದ್ದೇವೆ: ಬಿಜೆಪಿ ಆರೋಪಕ್ಕೆ ಸಿಎಂ ತಿರುಗೇಟು
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್​ 07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.7) ತಮ್ಮ ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿದ್ದಾರೆ. 2025ನೇ ಸಾಲಿನ ಕರ್ನಾಟಕ ಬಜೆಟ್​​ನ ಗಾತ್ರದ ಮೊತ್ತ ನಾಲ್ಕು ಲಕ್ಷ ಕೋಟಿ ರೂಪಾಯಿ. ಇನ್ನು ಈ ಬಜೆಟ್​ನಲ್ಲಿ ಅಲ್ಪಸಂಖ್ಯಾತರು ಅಂದರೆ, ಮುಸ್ಲಿಂ ಕ್ರಿಶ್ಚಿಯನ್​ ಸಮುದಾಯಕ್ಕೂ ಕೊಡುಗೆ ನೀಡಿದ್ದಾರೆ.

ಇದರಿಂದ ಸಿಡಿದೆದ್ದಿರುವ ವಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಸಿದ್ದರಾಮಯ್ಯ ಬಜೆಟ್​ ವಿರುದ್ಧ ಕ್ರೋಶ ಹೊರಹಾಕುತ್ತಿವೆ. ಇದೊಂದು ಸಾಬರ ಬಜೆಟ್, ರಂಜಾನ್ ಹಬ್ಬಕ್ಕೆ ಈ ಬಜೆಟ್​ನಲ್ಲಿ ಭರ್ಜರಿ ಕೊಡುಗೆ ನೀಡಲಾಗಿದೆ. ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಅಂತೆಲ್ಲಾ ಟೀಕೆಗಳನ್ನು ಮಾಡುತ್ತಿವೆ. ಇದೀಗ ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

ಅಲ್ಲದೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯ ಇತ್ತ ಸಿದ್ದರಾಮಯ್ಯನವರು ಬಜೆಟ್​ ಮಂಡನೆ ಬಳಿಕ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಜೆಟ್​​ನ ಸಂಪೂರ್ಣ ವಿವರವನ್ನು ನೀಡಿದರು. ಅಲ್ಲದೇ ಸಾಲದ ಬಜೆಟ್​, ಮುಸ್ಲಿಮರ ಬಜೆಟ್​ ಎನ್ನುವ ಟೀಕೆಗಳಿಗೆ ತಿರುಗೇಟು ನೀಡಿದರು. ಅಲ್ಲದೇ ಎಸ್​ಸಿಪಿ-ಟಿಎಸ್​ಪಿ ಹಣದ ಬಗ್ಗೆ ವಿವರಿಸಿದ್ದಾರೆ.
WhatsApp Group Join Now
Telegram Group Join Now
Share This Article