ಗದಗ, ಮಾರ್ಚ್ 08: ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಐತಿಹಾಸಿಕ ಗವಿಮಠಕ್ಕೆ ಕುಮಾರ್ ಮಹಾರಾಜ ಸ್ವಾಮೀಜಿಯವರನ್ನು ನೇಮಕ ಮಾಡಲಾಗಿದೆ. ಆದರೆ, ಸ್ವಾಮೀಜಿ ವಿರುದ್ಧ ಆರೋಪವೊಂದು ಕೇಳಿಬಂದಿದೆ. ಗವಿಮಠದ ಸುತ್ತಲೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಾರೆಂದು ಭೋವಿ ಸಮಾಜದವರ ವಿರುದ್ಧ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿ ಅರೆಸ್ಟ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
“ಸ್ವಾಮೀಜಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲು ಮಾಡಿದ್ದಾರೆ. ಕಲ್ಲುಗಣಿಗಾರಿಕೆ, ಮರಳು ದಂಧೆ ಮಾಡುವವರ ವಿರುದ್ಧ ಹೋರಾಟ ಮಾಡಿದರು. ಹೀಗಾಗಿ, ಸ್ವಾಮೀಜಿ ಮೇಲೆ ವಿನಾಕಾರಣ ಒಂದು ಸಮುದಾಯದವರು ಆರೋಪ ಮಾಡುತ್ತಿದ್ದಾರೆ. ನಮಗೆ ಏನಾದರೂ ಸಮಸ್ಯೆಯಾದರೂ ಸ್ವಾಮೀಜಿ ಮುಂದೆ ಬರುತ್ತಿದ್ದರು. ರಾಜಕಾರಣಿಗಳು ಕೈವಾಡದಿಂದ ಹೀಗೆ ಮಾಡುತ್ತಿದ್ದಾರೆ. ನಮ್ಮ ಸ್ವಾಮೀಜಿಯನ್ನು ಮಠದಿಂದ ಹೊರಕ್ಕೆ ಹಾಕಿ, ಕೊಠಡಿಗೆ ಬೀಗ ಹಾಕಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡೆಸಿದ್ದಾರೆ.