ಬೆಳಗಾವಿ. ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಸಿ.ಟಿ ರವಿ ಅವರು ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ಶುಕ್ರವಾರ ಮಾರ್ಚ್ 7 ರಂದುಸಾಯಂಕಾಲ 6.30 ಘಂಟೆಗೆ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ಮಾರ್ಚ್ 8 ರಂದು ಬೆಳಗ್ಗೆ 7:00 ಕ್ಕೆ ದಕ್ಷೀಣ ಕಾಶಿ ಶ್ರೀ ಕಪಿಲೇಶ್ವರ ಮಂದಿರ ದರ್ಶನ, ನಗರದ ವೇಲಕಮ್ ಹೋಟೆಲನಲ್ಲಿ ಬೆಳಿಗ್ಗೆ 9:00 ಘಂಟೆಗೆ ನ್ಯಾಯವಾದಿಗಳ ಜೊತೆ ಸಭೆ,10.30 ಕ್ಕೆ ನಗರದ ವೆಲಕಮ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಮದ್ಯಾಹ್ನ 1.30 ಕ್ಕೆ ನಂದಗಡದ
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಸಮಾಧಿಗೆ ಭೇಟಿ,3:00 ಕ್ಕೆ ಚನ್ನಮ್ಮನ ಕಿತ್ತೂರು ವೀರರಾಣಿ ಕಿತ್ತೂರು ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ
ಹಾಗೂ ಕಾರ್ಯಕರ್ತರ ಭೇಟಿ ಸಂಜೆ 4:00 ಕ್ಕೆ ಹಿಂದವಾಡಿಯ ಗೋಮಟೇಶ ವಿದ್ಯಾಪಿಠ ದಲ್ಲಿ ಭಾ.ಜ.ಪಾ ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಭಾ.ಜ.ಪಾ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.