ಬೆಂಗಳೂರು, ಮಾರ್ಚ್ 04: ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಅಧಿಕಾರಿಗಳು ಬೆಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ನೈಜೀರಿಯಾದ ಎಸ್ಸೋ ಜರ್ಮನ್ ಮತ್ತು ಜಾನ್ ಚುಕುವಾ ಬಂಧಿತರು. ಆರೋಪಿಗಳಿಂದ 17 ಲಕ್ಷ ಮೌಲ್ಯದ 108 ಗ್ರಾಂ ಎಂಡಿಎಂಎ, ಎರಡು ಮೊಬೈಲ್ಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳು ಮುಂಬೈನಿಂದ ಮಾದಕ ದ್ರವ್ಯ ತಂದು ಪರಿಚಯಸ್ಥರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದು ನೆಲೆಸಿದ್ದಾರೆ.