ನೂರಾರು ನಾಯಕರನ್ನು ರೂಪಿಸುವ ವ್ಯಕ್ತಿ ನಿಜವಾದ ನಾಯಕ

Ravi Talawar
ನೂರಾರು ನಾಯಕರನ್ನು ರೂಪಿಸುವ ವ್ಯಕ್ತಿ ನಿಜವಾದ ನಾಯಕ
WhatsApp Group Join Now
Telegram Group Join Now
ಬೈಲಹೊಂಗಲ: ಅಧಿಕಾರ ಪ್ರತಿಷ್ಠೆ ಚಪ್ಪಾಳೆ ಹಾರ ತುರಾಯಿ ಸನ್ಮಾನಗಳಿಂದ ವ್ಯಕ್ತಿ ನಾಯಕವಾಗುವದಿಲ್ಲ ತನ್ನಂತೆ  ನೂರಾರು ನಾಯಕರನ್ನು ರೂಪಿಸುವವನೆ  ನಿಜವಾದ ನಾಯಕ ಎಂದು ನೈರುತ್ಯ ರೇಲ್ವೆಯ ಡಿ ಆರ್ ಯು ಸಿ ಸಿ ನಿರ್ದೇಶಕ  ಎಫ್ ಎಸ್ ಸಿದ್ದನಗೌಡರ ಹೇಳಿದರು.
       ಪತ್ರಿ ಬಸವನಗರ ಅಭಿವೃದ್ಧಿ ಸಂಘ, ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ  ಕದಳಿ ಮಹಿಳಾ ವೇದಿಕೆ,  ಹಿರಿಯ ನಾಗರಿಕರ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಪತ್ರಿಬಸವ ಮಂಟಪದಲ್ಲಿ  ಆಯೋಜಿಸಿದ್ದ 27ನೆಯ ಮಾಸಿಕ ಅನುಭಾವ ಗೋಷ್ಠಿ ಹಾಗೂ ಹರ್ಡೆಕರ್  ಮಂಜಪ್ಪನವರ ಜಯಂತಿ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,  ಸಾವಿರಾರು ರಾಷ್ಟ್ರ ಭಕ್ತರನ್ನು ನಾಡಭಕ್ತರನ್ನು ಬಸವ ಭಕ್ತರನ್ನು ತಯಾರು ಮಾಡಿ ಬಸಣ್ಣನವರ ವಚನಗಳನ್ನು ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಪರಿಚಯಿಸಿ ಪ್ರಶಂಸೆಗೆ ಪಾತ್ರರಾದ ಮಂಜಪ್ಪನವರು ನಮಗೆ ಸ್ಪೂರ್ತಿ ಎಂದರು.
ನೆಮ್ಮದಿಯ ಬದುಕಿಗೆ ಧಾರ್ಮಿಕ ವಿಚಾರಗಳು  ಇಂದಿನ ಯಾಂತ್ರಿಕ ಯುಗದಲ್ಲಿ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ.  12ನೇ ಶತಮಾನದಲ್ಲಿ ಶರಣರು ಬರೆದ ಒಂದೊದು ವಚನಗಳು ನಮ್ಮ ಸಾಮಾಜಿಕ, ವೈಯಕ್ತಿಕ ಜವಾಬ್ದಾರಿ, ನಮ್ಮ ನಡೆ ನುಡಿ,  ಧಾರ್ಮಿಕ ವಿಚಾರದ ಜೋತೆಗೆ ನಮ್ಮ ಕಾಯಕವನ್ನು  ಸಾರುವ  ನುಡಿಗಳಾಗಿದ್ದು ಸಮಾಜದ ಎಲ್ಲ ಕಾಯಕ ಮತ್ತು ಆಡಳಿತ ವರ್ಗಗಳನ್ನು ಸದಾ ಎಚ್ಚಿರಿಸುವ ಜಗತ್ತಿನ ಅತ್ಯಂತ ಬಲಿಷ್ಠವಾದ ಸಾಹಿತ್ಯ ಎಂದರೆ ಅದು ವಚನ ಸಾಹಿತ್ಯವಾಗಿದ್ದು ಪ್ರತಿಯೊಬ್ಬ ವ್ಯಕ್ತಿ ಪ್ರತಿದಿನ ವಚನಗಳ ಪಠಣಮಾಡುವದು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೆಯಾದರೆ ನೆಮ್ಮದಿಯ ಬಾಳಿನೊಂದಿಗೆ ಮನಶಾಂತಿಯ ಉನ್ನತ ಬದುಕು ನಮ್ಮದಾಗುತ್ತದೆ ಶಾಂತಿ ಸಹಬಾಳ್ವೆಯ ಸಮಾಜ ನಿರ್ಮಾಣವಾಗುತ್ತದೆ ಎಂದರು.
     ಮುರಗೋಡದ ಬಸವ ಮಹಾಮನೆ ಸದಸ್ಯೆ ಶೋಭಾ ಹಂಪಿಹೊಳಿ ಉಪನ್ಯಾಸ ನೀಡಿ,  ನಾಡಿನಲ್ಲಿ ಬಸವ ಜಯಂತಿಯ ಆಚರಣೆಗೆ ಕರಣಿಭೂತರಾದ ಮಂಜಪ್ಪನವರು ರಾಷ್ಟ್ರ ಜೀವನ ಗ್ರಂಥ ಮಾಲೆ, ಸತ್ಯಾಗ್ರಹ ಗ್ರಂಥ ಮಾಲೆ, ಜನಜಾಗೃತಿ ಗ್ರಂಥ ಮಾಲೆ, ಮಕ್ಕಳ ಸಾಹಿತ್ಯ ಗ್ರಂಥ ಮಾಲೆ, ಲಿಂಗಾಯತ ವಿದ್ಯಾಲಯ ಗ್ರಂಥ ಮಾಲೆ ಮುಂತಾದವುಗಳನ್ನು ಹುಟ್ಟು ಹಾಕಿ ಜನರಲ್ಲಿ ನಾಡು ನುಡಿ ದೇಶ ಸಾಹಿತ್ಯ ಸಂಸ್ಕೃತಿಗಳ ಅರಿವು ಮೂಡಿಸಿ ಗಾಂಧಿ ತತ್ವಗಳನ್ನ ಅಳವಡಿಸಿಕೊಂಡು ಬಾಳಿ ಬದುಕಿದ ಕರ್ನಾಟಕದ ಗಾಂಧಿ ರಾಷ್ಟ್ರಧರ್ಮದೃಷ್ಟ ನಿರಂಜನ ಶರಣ ಮಂಜಪ್ಪನವರು ಸಮಾಜಕ್ಕೆ ಮಾದರಿಯಾಗಿದ್ದು ವಚನ ಸಾಹಿತ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದವ ಜೀವನ‌ ಚರಿತ್ರೆ ಮಕ್ಕಳ ಪಠ್ಯ ಪುಸ್ತಕದಲ್ಲಿ ವಿವರವಾಗಿ ಮುದ್ರಣವಾಗಬೇಕೆಂದರು.
      ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪತ್ರಿ ಬಸವ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಮಾತನಾಡಿ, ಮಾನವಿಯತೆ ನೆಲೆಗಟ್ಟಿನ ಮೇಲೆ ಜಾತಿರಹಿತ ಸಮಾನತೆಯ ಕಾಯಕ ತತ್ವದಡಿಯ ಭಕ್ತಿಭಾವದ ಲಿಂಗಾಯತ ಧರ್ಮದ ಸಂಸ್ಥಾಪಕ‌ ಅಣ್ಣ ಬಸವಣ್ಣನವರ ಹಾಕಿಕೊಟ್ಟ ಧರ್ಮದ ಮಾರ್ಗದಲ್ಲಿ ನಡೆಯೊಣ. ಶರಣರು ಕಂಡ ಜಾತಿರಹಿತ, ಸಮಾನತೆಯ ಸಮಾಜದ ನಿರ್ಮಾಣ ಸ್ತ್ರೀ ಸಮಾನತೆಯಿಂದ  ಸಮಾಜೊದ್ದಾರಕ ಕಾರ್ಯಗಳಲ್ಲಿ ಭಾಗವಹಿಸಿ ತನು ಮನ ದನ ಸಹಾಯ ಸಹಕಾರ ನೀಡಿ ಲಿಂಗಾಯತ ಧರ್ಮದ ಜಾಗೃತಿ ಮೂಡಿಸೋಣ ಎಂದರು.
      ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ. ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕಾಡಪ್ಪ ರಾಮಗುಂಡಿ ದುಂಡಯ್ಯ ಕುಲಕರ್ಣಿ ಮೃತ್ಯುಂಜಯ ಗಡತನವರ ವೀರಭದ್ರಪ್ಪ ಕಾಪಸೆ ಗಂಗಣ್ಣ ಅಂಗಡಿ ಅಶೋಕ ಸಾಲಿ ಮಾರುತಿ ಮಸ್ತಮ್ಮನವರ್ ಶಿವಲೀಲಾ ಹುಲಿಕಟ್ಟಿ ಕಲಾವತಿ ಕಡಕೋಳ ಗೀತಾ ಅರಳಿಕಟ್ಟಿ ವಿಜಯಾ ಹಾಲಬಾವಿ ನಿರ್ಮಲಾ ಕಲ್ಬುರ್ಗಿ  ಸಾವಿತ್ರಿ ಹೊತ್ತಿಗಿಮಠ ಸರ್ವ ಸಂಘಟನೆಗಳ ನೂರಾರು ಸದಸ್ಯರು ಉಪಸ್ಥಿತರಿದ್ದರು.
       ದಾನೇಶ್ವರಿ ಸಾಣಿಕೊಪ್ಪ ವಚನ ಚಿಂತನೆಗೈದರು ಸುವರ್ಣ ಬಿಜುಗುಪ್ಪಿ ಅಧ್ಯಕ್ಷತೆ ವಹಿಸಿದ್ದರು ಅಜಗಣ್ಣ ಮುಕ್ತಾಯಕ್ಕ ಬಳಗ ಪ್ರಾರ್ಥಿಸಿದರು ಬಸವರಾಜ್ ಹುಬ್ಬಳ್ಳಿ ಸ್ವಾಗತಿಸಿದರು ಸುಹಾಸಿನಿ ಶಿಳ್ಳಿ ಪ್ರಸ್ತಾವಿಕ ನುಡಿದರು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ್ ಕೊಳವಿ ವಂದಿಸಿದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ದಾಕ್ಷಾಯಿಣಿ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು.
WhatsApp Group Join Now
Telegram Group Join Now
Share This Article