ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ. ನೇಪಾಳದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿರುವ ಜನರಿಗೆ ಭೂಕಂಪದ ಅನುಭವ ಆಗಿದೆ. ಅಲ್ಲದೆ ಭಾರತ ಚೀನಾ ಮತ್ತು, ಟಿಬೆಟ್ನ ಕೆಲವು ಭಾಗಗಳಲ್ಲೂ ಭೂಕಂಪದ ಅನುಭವ ಆಗಿದೆ.
ನೇಪಾಳದ ಮಧ್ಯ ಭಾಗದಲ್ಲಿರುವ ಹಿಮಾಲಯ ಪ್ರದೇಶದಲ್ಲಿ ಸಿಂಧುಪಾಲ್ ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಭೂಕಂಪದ ಕೇಂದ್ರ ಬಿಂದು ಹೇಳಲಾಗುತ್ತಿದೆ.
ಭೂಕಂಪದ ಕೇಂದ್ರಬಿಂದು ಸಿಂಧುಪಾಲ್ ಚೌಕ್ ಜಿಲ್ಲೆಯ ಭೈರವಕುಂಡದಲ್ಲಿದ್ದು, ಭೂಕಂಪ ಬೆಳಿಗ್ಗೆ 2.51ಕ್ಕೆ (ಸ್ಥಳೀಯ ಸಮಯ) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.
ಭೂಕಂಪದ ಪರಿಣಾಮ ಯಾವುದೇ ಸಾವುನೋವುಗಳು ಅಥವಾ ಗಂಭೀರ ಹಾನಿಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.