ಗುವಾಹಟಿ, ಫೆಬ್ರವರಿ 27: ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭೂಕಂಪದ ಅನುಭವವಾಗಿದೆ. ತೀವ್ರತೆ ರಿಕ್ಟರ್ ಮಾಪಕದಲ್ಲಿ 5.1 ಎಂದು ದಾಖಲಾಗಿದೆ. ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪನವು ಬೆಳಗಿನ ಜಾವ 2.25 ಕ್ಕೆ 16 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ, ಈ ಪ್ರದೇಶವು ಹಲವಾರು ಪ್ರಮುಖ ಭೂಕಂಪಗಳಿಗೆ ತುತ್ತಾಗಿದೆ, ಉದಾಹರಣೆಗೆ 1950 ರ ಅಸ್ಸಾಂ-ಟಿಬೆಟ್ ಭೂಕಂಪ (ತೀವ್ರತೆ 8.6) ಮತ್ತು 1897 ರ ಶಿಲ್ಲಾಂಗ್ ಭೂಕಂಪ (ತೀವ್ರತೆ 8.1) , ಇವೆರಡೂ ಇತಿಹಾಸದಲ್ಲಿ ಅತ್ಯಂತ ಮಾರಕ ಭೂಕಂಪಗಳಲ್ಲಿ ಸೇರಿವೆ.
ಇದುವರೆಗೆ ಯಾವುದೇ ಆಸ್ತಿಪಾಸ್ತಿ ನಷ್ಟ ಅಥವಾ ಸಾವುನೋವು ಸಂಭವಿಸಿದ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ ಎಂದು ಒಡಿಶಾ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಭೂಕಂಪದ ಕೇಂದ್ರಬಿಂದು ಇದ್ದ ಕಾರಣ ಅದರ ಪರಿಣಾಮ ಹೆಚ್ಚು ಇರಲಿಲ್ಲ ಎಂದು ಅವರು ಹೇಳಿದರು. ಒಡಿಶಾದ ಪಾರಾದೀಪ್, ಪುರಿ, ಬೆರ್ಹಾಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಅವರು ಹೇಳಿದರು.