ಪ್ರಯಾಗ್ರಾಜ್, ಫೆಬ್ರವರಿ 27: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳವನ್ನು ಪ್ರಧಾನಿ ಮೋದಿ‘ ಏಕತೆಯ ಮಹಾಯಜ್ಞ’ ಎಂದು ಬಣ್ಣಿಸಿದ್ದಾರೆ. ಈ ಕುರಿತು ಬ್ಲಾಗ್ ಬರೆದಿದ್ದು, ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಲು ಒಟ್ಟಾಗಿ ಬಂದ 140 ಕೋಟಿ ಭಾರತೀಯರ ಭಕ್ತಿ ಮತ್ತು ಭಾಗವಹಿಸುವಿಕೆಗೆ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದರು.
45 ದಿನಗಳ ಕಾಲ ನಡೆದ ಮಹಾಕುಂಭವನ್ನು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿಬಿಂಬ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಸಮಾಜದ ಎಲ್ಲಾ ವರ್ಗಗಳ ಜನರು ನಂಬಿಕೆ ಮತ್ತು ಭಕ್ತಿಯಲ್ಲಿ ಹೇಗೆ ಒಂದಾಗುತ್ತಾರೆ ಎಂಬುದನ್ನು ಒತ್ತಿ ಹೇಳಿದರು. ಈ ಕಾರ್ಯಕ್ರಮವು ಏಕ ಭಾರತ ಶ್ರೇಷ್ಠ ಭಾರತ ಎನ್ನುವ ಪರಿಕಲ್ಪನೆಯನ್ನು ಸಾಕಾರಗೊಳಿಸಿತು. ಇದು ಲಕ್ಷಾಂತರ ಭಕ್ತರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು.