ಮೈನಿಂಗ್ ಕೇಸ್ : ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗಾಗಿ ಲೋಕಾಯುಕ್ತ ರಾಜ್ಯಪಾಲರಿಗೆ ಮನವಿ

Ravi Talawar
ಮೈನಿಂಗ್ ಕೇಸ್ : ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗಾಗಿ ಲೋಕಾಯುಕ್ತ  ರಾಜ್ಯಪಾಲರಿಗೆ ಮನವಿ
WhatsApp Group Join Now
Telegram Group Join Now

ಬೆಂಗಳೂರು, (ಫೆಬ್ರವರಿ 26): ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ವಿರುದ್ದದ್ದ ಮೈನಿಂಗ್ ಕೇಸ್ ಸಂಬಂಧ ಲೋಕಾಯುಕ್ತ ಪೋಲಿಸರು ಪ್ರಾಸಿಕ್ಯೂಷನ್ ಅನುಮತಿಗೆ ಮತ್ತೊಮ್ಮೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಕಳೆದ ಏಳು ತಿಂಗಳ ಹಿಂದೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಈ ವೇಳೆ ಕನ್ನಡದಿಂದ ಇಂಗ್ಲಿಷ್​ಗೆ ಭಾಷಾಂತರ ಮಾಡಲು ರಾಜ್ಯಪಾಲರು ಸೂಚನೆ ನೀಡಿದ್ದರು. ಸದ್ಯ 5 ಸಾವಿರ ಪುಟಗಳ ಭಾಷಾಂತರ ಮಾಡಿ ಮತ್ತೊಮ್ಮೆ ಪ್ರಾಸಿಕ್ಯೂಷನ್​​ಗೆ ವಿಶೇಷ ತನಿಖಾ ತಂಡ ಅನುಮತಿ ಕೇಳಿದೆ. ಕುಮಾರಸ್ವಾಮಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್​​ಗೆ ಮೈನಿಂಗ್ ಮಂಜೂರು ಮಾಡಿದ್ದರು‌. ಲೋಕಾಯುಕ್ತ ಎಸ್ ಐಟಿ ಸಂಡೂರು ತಾಲೂಕಿನ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ ನ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

WhatsApp Group Join Now
Telegram Group Join Now
Share This Article