ಬೈಲಹೊಂಗಲ: ನಾಡಿನ ಹೆಸರಾಂತ ಮಠಗಳಲ್ಲೊಂದಾದ ಮೂರು ಸಾವಿರ ಮಠದ ಮಹಾಶಿವರಾತ್ರಿ ಉತ್ಸವಕ್ಕೆ ಹರಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಹಾಗೂ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಹೊಸುರು- ಬೈಲಹೊಂಗಲ ಇತಿಹಾಸದ ಪುಟಗಳಲ್ಲಿ ಮೂರುಸಾವಿರಮಠವು ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಾ ಬಂದಿದೆ. ಪರಮಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಗಳು 25 ವರ್ಷಗಳಲ್ಲಿ ಒಟ್ಟು 30 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ. ಬೈಲಹೊಂಗಲ ನಾಡಿನಲ್ಲಿ ಪ್ರಥಮ ಬಾರಿಗೆ ಶಿಕ್ಷಣ ಕ್ರಾಂತಿಗೆ ಭದ್ರಬುನಾದಿ ಹಾಕಿದರು ಹಾಗೂ ಬಡ, ಮಧ್ಯಮ ವರ್ಗದವರ ಜೀವನವನ್ನು ಬೆಳಗಿಸಿದ ಕೀರುತಿ ಪರಮ ಪೂಜ್ಯರಿಗೆ ಸಲ್ಲುತ್ತದೆ, ಪೂಜ್ಯರು ಆಯುರ್ವೇದಿಕ ಮೆಡಿಕಲ್ ವ ಸಂಶೋಧನಾ ಕೇಂದ್ರ, ಪದವಿಪೂರ್ವ ಕಾಲೇಜುಗಳು, ಪದವಿ ಕಾಲೇಜು, ಐಟಿಐ ಕಾಲೇಜು, ನಸಿರ್ಂಗ್ ಕಾಲೇಜು ಮತ್ತು ಬೆಳಗಾವಿ, ಧಾರವಾಡ, ಬೈಲಹೊಂಗಲ ಹಾಗೂ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದರು.
ಪರಮಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಗಳವರು ಅಂಗೈಕ್ಯರಾದ ನಂತರ ಶ್ರೀಮಠದ ಭವ್ಯ ಉಸ್ತುವಾರಿಯನ್ನು ಪೂಜ್ಯ ಶ್ರೀ ಮ.ನಿ.ಪ್ರ. ಪ್ರಭುನೀಲಕಂಠ ಮಹಾಸ್ವಾಮಿಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿ ಮುಡಿಗೇರಿಸಿಕೊಂಡು ತಮ್ಮ ಜೋಳಿಗೆಯಿಂದಲೇ ಸಮಾಜದ ಏಳಿಗೆಯನ್ನು ಬಯಸಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮಿಕ ಅನುಭಾವದ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ನಾಡಿನ ಜನರಿಗೆ ವೈದ್ಯಕೀಯ ಸೇವೆ ನೀಡುವ ಸಂಕಲ್ಪಹೊತ್ತು ಬೈಲಹೊಂಗಲದಲ್ಲಿ ನಿರಂತರ (24×7) ಸೇವೆಯೊಂದಿಗೆ 60 ಹಾಸಿಗೆವುಳ್ಳ ಮತ್ತು 10 ಹಾಸಿಗೆವುಳ್ಳ ತೀವ್ರ ನಿಗಾ ಘಟಕ (ICU) ವನ್ನು ಹೊಂದಿದ “ಈಶಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ” ಯನ್ನು ತೆರೆದಿದ್ದಾರೆ ಸಾಮಾಜಿಕ ಕಾರ್ಯಗಳೊಂದಿಗೆ ಧಾರ್ಮಿಕ ಮನೋಭಾವನ್ನು ಜಾಗೃತಗೊಳಿಸಲು ಪ್ರತಿ ವರ್ಷ ಪಾದಯಾತ್ರೆ ಹಮ್ಮಿಕೊಂಡು ರುದ್ರಾಕ್ಷಿಧಾರಣೆ, ಅಂಗದಿಕ್ಷೆಯಂತಹ ಕಾರ್ಯಕ್ರಮಗಳೊಂದಿಗೆ ಭಕ್ತಮನಗಳಿಗೆ ಶಿವಸ್ವರೂಪಿಗಳಾಗಿದ್ದಾರೆ. ಶ್ರೀ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ಆಶ್ರಯವನ್ನು ನೀಡಿ ಉಚಿತ ಶಿಕ್ಷಣವನ್ನು ಪೂರೈಸುತ್ತಾ ಶ್ರೀ ಮಠವನ್ನು ಉತ್ತುಂಗದ ಹಾದಿಯಲ್ಲಿ ಕೊಂಡೊಯ್ಯುಲು ಶ್ರೀಗಳು ಶ್ರಮಿಸುತ್ತಿರುವುದು ನಾಡಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಶಾಸಕ ಮಹಾಂತೇಶ ಕೌಜಲಗಿ ಕೊಂಡಾಡಿದರು.
ಪ್ರಾಸ್ತಾವಿಕವಾಗಿ ಮೂರು ಸಾವಿರ ಮಠದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮೀಜಿ ಮಾತನಾಡಿರು, ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು, ರುದ್ರಾಕ್ಷಿಮಠ, ಬೈಲಹೊಂಗಲ ಹುಬ್ಬಳ್ಳಿ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯರು, ಶಾಖಾ ಕೇದಾರಪೀಠ, ಹಿರೇಮಠ, ಮುತ್ನಾಳ
ಶ್ರೀ. ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಗ್ರಹ ಹಿರೇಮಠ, ನರಗುಂದ ಶ್ರೀ.ಮ.ನಿ.ಪ್ರ. ಮಡಿವಾಳೇಶ್ವರ ಮಹಾಸ್ವಾಮಿಗಳು, ಮಡಿವಾಳೇಶ್ವರ ಮಠ, ಬೈಲಹೊಂಗಲ ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಮೂರುಸಾವಿರ ವಿರಕ್ತಮಠ, ಉಪ್ಪಿನಬೆಟಗೇರಿ
ಶ್ರೀ ಮ.ನಿ.ಪ್ರ ಅಡವಿಸಿದ್ದರಾಮ ಮಹಾಸ್ವಾಮಿಗಳು ಅಡವಿಸಿದ್ದೇಶ್ವರ ಮಠ, ಶಿವಾಪೂರ ಪೂಜ್ಯಶ್ರೀ ವಿರೇಶ್ವರ ಮಹಾಸ್ವಾಮಿಗಳು, ಮಡಿವಾಳೇಶ್ವರ ಮಠ, ದೇವರತೀಗಿಹಳ್ಳಿ ಪೂಜ್ಯಶ್ರೀ ಸಂಗಮೇಶ್ವರ ಸ್ವಾಮಿಗಳು, ಮಹಾಂತೇಶ್ವರ ಮಠ, ನರೇಂದ್ರ ಶ್ರೀ ವೇ.ಮೂ. ವಿರೂಪಾಕ್ಷ ಸ್ವಾಮಿಗಳು ಬಂಗಾರಜ್ಜನಮಠ, ಏಣಗಿ,ಪೂಜ್ಯಶ್ರೀ. ಸಿದ್ಧಲಿಂಗ ದೇವರು, ಖಾಸ್ಸತೇಶ್ವರ ಮಠ, ತಾಳಿಕೋಟಿ ಹಾಗೂ ಉಪವಿಭಾಗಾಧಿಕಾರಿಗಳಾದ ಪ್ರಭಾವತಿ ಪಕ್ಕಿರಪುರ, ರವೀಂದ್ರ ಪಾಟೀಲ, ಶಾಹಿನ್ ಅಖ್ತರ, ಚಲನಚಿತ್ರ ನಟ ಶಿವರಂಜನ ಬೊಳಣ್ಣವರ, ಮಹಾಂತೇಶ ತುರಮರಿ, ಬಸವರಾಜ ಜನ್ಮಟ್ಟಿ, ಬಾಬು ಕೂಡಸೊಮಣ್ಣವರ, ಬಸವರಾಜ ಬಾಳೆಕುಂದ್ರಿಗಿ, ಮಹಾಂತೇಶ ಮತ್ತಿಕೊಪ್ಪ, ಕಾರ್ತಿಕ ಪಾಟೀಲ, ಅನೇಕ ಮುಖಂಡರು, ಸದ್ಭಕ್ತರು ಉಪಸ್ಥಿತರಿದ್ದರು.