ಹರ್ಷ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

Ravi Talawar
ಹರ್ಷ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ
WhatsApp Group Join Now
Telegram Group Join Now
ಬೆಳಗಾವಿ :  ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ವೈರಲೆಸ್ ಮೈದಾನದಲ್ಲಿ ನಡೆಯುತ್ತಿರುವ ಹರ್ಷಾ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿ, ಆಟಗಾರರಿಗೆ ಶುಭ ಹಾರೈಸಿದರು.
ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅತೀ ಹೆಚ್ಚು ಪ್ರೋತ್ಸಾಹ, ಸಹಕಾರ ನೀಡಲಾಗುತ್ತಿದೆ. ಯುವಕರು ಹೆಚ್ಚೆಚ್ಚು ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಳಿಗೆ ಸಹಕಾರವಾಗುತ್ತದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಅಯೋಧ್ಯೆ ಸ್ಪೋರ್ಟ್ಸ್ ಕಡೋಲಿ ಮತ್ತು ಶಿವಶಕ್ತಿ ಬೈಲೂರ್ ತಂಡಗಳ ನಡುವೆ ಫೈನಲ್ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಈ ವೇಳೆ ಶಂಕರಗೌಡ ಪಾಟೀಲ, ಮಹೇಶ ಸುಗನೆನ್ನವರ, ಅಪ್ಸರ್ ಜಮಾದಾರ, ನೂರ್ ಮುಲ್ಲಾ, ಜೀನಾ ಸನದಿ, ಜಮೀರ್ ಕಾಜಿ, ಷರೀಫ್ ಸನದಿ, ಅಲ್ತಾಫ್ ಯಾದವಾಡ, ರವಿ ದೇಸಾಯಿ, ನೇಹಾಲ ಮನಿಯಾರ, ಅರ್ಬಾಜ್ ಜಮಾದಾರ, ಮೀರಾ ಮುಲ್ಲಾ ಸೇರಿದಂತೆ ಕ್ರಿಕೆಟ್ ಪ್ರಿಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article