ಬೆಳಗಾವಿ.ಪ್ರಯಾಗರಾಜ ನಿಂದ ಮರಳಿ ಬರುವಾಗ ಜಬಲಪೂರ್ ಹತ್ತಿರ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾತ್ರಾರ್ಥಿಗಳ ವಾಹನ ಅಪಘಾತವಾಗಿ ಈ ದುರ್ಘಟನೆಯಲ್ಲಿ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ಒಬ್ಬರು ಜೀವನ್ಮರಣ ಹೋರಾಟದಲ್ಲಿ ಇದ್ದಾರೆ ಮತ್ತೊಬ್ಬರು ಸದಾಶಿವ ಅನ್ನೋ ವ್ಯಕ್ತಿ ಅವರು ಅದೃಷ್ಟಾವತ್ ಬದುಕಿದ್ದಾರೆ. ಅಪಘಾತ ಸ್ಥಳದ 20km ಅಂತರದಲ್ಲಿದ್ದ ಕಿತ್ತೂರಿನ ಭಾ.ಜ.ಪಾ ಕಾರ್ಯಕರ್ತರ ತಂಡಕ್ಕೆ ತಕ್ಷಣ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಸುಭಾಷ್ ಪಾಟೀಲ್ ಅವರು ಕರೆ ಮಾಡಿ ಪ್ರಯಾಗರಾಜ್ ದಿಂದ ಮರಳಿ ಬರುತ್ತಿದ್ದ ಕಿತ್ತೂರಿನ ಬಿಜೆಪಿ ಕಾರ್ಯಕರ್ತರ ತಂಡಕ್ಕೆ ವಿಷಯ ಮುಟ್ಟಿಸಿ ತಕ್ಷಣ ಅಪಘಾತವಾದ ಸ್ಥಳಕ್ಕೆ ತೆರಳಲು ಹೇಳಿದರು ಭಾಜಪಾ ಕಿತ್ತೂರು ಮಂಡಲದ ಅಧ್ಯಕ್ಷರಾದ ಶ್ರೀಕರ ಕುಲಕರ್ಣಿ ಮತ್ತು ಪ್ರಧಾನ ಕಾರ್ಯದರ್ಶಿಯಾದ ಸಿದ್ದು ಬೋಳನ್ನವರ ಬಿಜೆಪಿ ಮುಖಂಡರಾದ ರವಿರಾಜ ಇನಾಮದಾರ ಮತ್ತು ಶ್ರೀಧರ ನಾಗನೂರ ಅವರು ಗಾಯಾಳು ಸದಾಶಿವ ಅವರೊಂದಿಗೆ ಇದ್ದು ಎಲ್ಲಾ ಉಪಚಾರಗಳಿಗೆ ನಿಂತಿದ್ದು ಪೊಲೀಸ್ ತನಿಖೆ ಆಸ್ಪತ್ರೆಯ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.