ಸವದತ್ತಿ: ದೇಶ ಅಪ್ನಾಯೆನ್ ಸಹಯೋಗ ಪೌಂಡೇಶನದಿಂದ “ಆಕ್ಟಿಜನ್ ಕ್ಲಬ್ ” ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಗೊರಗುದ್ದಿ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿದ
6ನೇ ತರಗತಿಯ ಮಕ್ಕಳಿಗೆ ಅಣುಕು ಚುನಾವಣೆ,ಪರಸ್ಪರ ಅವಲಂಬನೆ,ಅಣುಕು ಪಂಚಾಯತ, ಹೊರೆ ಹಂಚಿಕೊಳ್ಳು,ಡ್ಯೂಟಿ ಬಾಂಡ್ ಈ ಮೇಲಿನ 5 ಹಂತದ ಚಟುವಟಿಕೆಗಳನ್ನು “ಆಕ್ಟಿಜನ್ ಕ್ಲಬ್ ” ಸಹಯೋಗದಿಂದ ಮಕ್ಕಳಿಗೆ ಎಲ್ಲ ಶಿಕ್ಷಕರ ಸಹಾಯದಿಂದ ಶ್ರೀಮತಿ ವೈಶಾಲಿ ಕಿಚಡಿ ನಡೆಸಿಕೊಟ್ಟರು.
ಇದೇ ರೀತಿಯಾಗಿ ಸವದತ್ತಿ ತಾಲೂಕಿನ ಎಲ್ಲ ಸರಕಾರಿ ಶಾಲೆಗಳಲ್ಲಿ “ಆಕ್ಟಿಜನ್ ಕ್ಲಬ್ ” ಅತ್ಯಂತ ಕ್ರಿಯಾಶೀಲವಾಗಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಪ್ರಧಾನ ಗುರುಗಳಾದ ಮಹಾಂತೇಶ ಹೊಂಗಲ ಮತ್ತು ಸಹಶಿಕ್ಷಕರಾದ ಪ್ರವೀಣ ಜೆಟ್ಟೆಣ್ಣವರ ಸಹಾಯದಿಂದ ಚಟುವಟಿಕೆಯನ್ನು ಯಶಸ್ವಿಯಾಗಿ ಮಕ್ಕಳಿಗೆ ಮಾಡಿಸಲಾಯಿತು. ಶಿಕ್ಷಕರಾದ ಎ ಬಿ. ಕಬ್ಬೂರ, ಶ್ರೀಮತಿ ವಿಜಯಾ ಲಕ್ಷ್ಮಟ್ಟಿ, ಶ್ರೀಮತಿ ವಂದನಾ ಉಪಾಧ್ಯೆ, ಶ್ರೀ ಶ್ರೀಧರ ಯಳಕರ, ರಾಜು ಹಮ್ಮನವರ, ರಾಮಸಿದ್ದ ಖನಗಾರ, ಚಿದಾನಂದ ಬಯ್ಯಾರ, ಗೀತಾ ಗುಜನಾಳ ಹಾಗೂ ಶಾಲಾ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.