ಬೆಂಗಳೂರು: ರಾಜ್ಯ ಸರ್ಕಾರ ಮೀನಾಕ್ಷಿ ನೇಗಿ ಅವರನ್ನು ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ,(PCCF) ಅರಣ್ಯ ಪಡೆ ಮುಖ್ಯಸ್ಥೆ (HOFF) ಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಅವರು ಪ್ರಸ್ತುತ ದೇಶದ ಎರಡನೇ ಮಹಿಳಾ ಪಿಸಿಸಿಎಫ್ ಆಗಿದ್ದಾರೆ. ಮಹಾರಾಷ್ಟ್ರದ ಪಿಸಿಸಿಎಫ್, ಹೆಚ್ ಒಎಫ್ ಎಫ್ ಶೋಮಿತಾ ಬಿಸ್ವಾಸ್ ಮೊದಲನೆಯವರಾಗಿದ್ದಾರೆ.
ದೇಶವು ಈ ಹಿಂದೆ ಅಸ್ಸಾಂ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಅನೇಕ ಮಹಿಳಾ ಪಿಸಿಸಿಎಫ್ ಗಳನ್ನು ಕಂಡಿದೆ. ಕರ್ನಾಟಕಕ್ಕೆ ಮೀನಾಕ್ಷಿ ನೇಗಿ ಮೊದಲನೆಯವರಾಗಿದ್ದಾರೆ.
ಕಳೆದ ಜನವರಿ 31ರಂದು ನಿವೃತ್ತರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರಿಂದ ಮೀನಾಕ್ಷಿ ನೇಗಿ ಅಧಿಕಾರ ವಹಿಸಿಕೊಂಡರು. ಪಿಸಿಸಿಎಫ್, ವನ್ಯಜೀವಿ, ಸುಭಾಷ್ ಮಲ್ಖಡೆ ಮಧ್ಯಂತರವಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು. ಮೀನಾಕ್ಷಿ ನೇಗಿಯವರು 2015-18 ರವರೆಗೆ ಎಪಿಸಿಸಿಎಫ್ ಹುದ್ದೆಯನ್ನು ಅಲಂಕರಿಸಿದ್ದರು.